*ಗೋಣಿಕೊಪ್ಪ, ಜ. ೨: ಏಕಮುಖ ವಾಹನ ಸಂಚಾರ ನಿಯಮವನ್ನು ಸಡಿಲಗೊಳಿಸಿ ಒಂದು ತಿಂಗಳವರೆಗೆ ಪ್ರಾಯೋಗಿಕವಾಗಿ ದ್ವಿಮುಕ ಸಂಚಾರವನ್ನು ಮುಂದುವರಿಸಿದ ನಂತರ ಬೆಳವಣಿಗೆಯನ್ನು ಗಮನಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿರುವುದಾಗಿ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.
ಸೋಮವಾರ ಗೋಣಿಕೊಪ್ಪ ಪಟ್ಟಣದ ಬೈಪಾಸ್‌ನಲ್ಲಿ ೫೫ ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರಿಟ್ ಹಾಗೂ ಡಾಂಬರೀಕರಣಗೊAಡ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದೊಂದಿಗೆ ಈ ಹಿಂದೆ ಏಕಮುಖ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಈ ನಿಯಮವನ್ನು ರದ್ದುಗೊಳಿಸುವಂತೆ ವರ್ತಕರು ಬೇಡಿಕೆ ಸಲ್ಲಿಸುತ್ತಿರುವುದರಿಂದ ಏಕಮುಖ ಸಂಚಾರ ನಿಯಮವನ್ನು ಸಡಿಲಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಒಂದು ತಿಂಗಳ ಅವಧಿಗೆ ಈ ಪ್ರಯೋಗವನ್ನು ನಡೆಸಲಾಗುವುದು ಎಂದು ಹೇಳಿದರು.
ಗೋಣಕೊಪ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ೯೧.೨೫ ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ. ಅದರಂತೆ ೫೫ ಲಕ್ಷದಲ್ಲಿ ಬೈಪಾಸ್ ರಸ್ತೆ ಅಭಿವೃದ್ಧಿಗೊಂಡಿದೆ. ೮ ಲಕ್ಷದಲ್ಲಿ ಜ್ಯೂಸ್ ಫ್ಯಾಕ್ಟರಿ ರಸ್ತೆ, ೬.೨೫ ಲಕ್ಷದಲ್ಲಿ ಸೆಂಟ್ ಥೋಮಸ್ ಶಾಲೆ ರಸ್ತೆ, ೪.೭೫ ಲಕ್ಷದಲ್ಲಿ ಪೋಸ್ಟ್ ಆಫೀಸ್ ರಸ್ತೆ, ೫ ಲಕ್ಷದಲ್ಲಿ ಮಾರುಕಟ್ಟೆ ಸಮೀಪದ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ, ೩.೭೫ ಲಕ್ಷದಲ್ಲಿ ಆಸ್ಪತ್ರೆ ಹಿಂಭಾಗದ ರಸ್ತೆ, ೪ ಲಕ್ಷದಲ್ಲಿ ಉಮಾಮಹೇಶ್ವರಿ ದೇವಸ್ಥಾನ ಮುಂಭಾಗದ ರಸ್ತೆ, ೩ ಲಕ್ಷ ಅನುದಾನದಲ್ಲಿ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಕಟ್ಟಡ ಮೇಲ್ಚಾವಣಿ ನಿರ್ಮಾಣ ಮತ್ತು ೧.೫೦ ಲಕ್ಷದಲ್ಲಿ ಒಂದನೇ ವಿಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನೆರವೇರಲಿವೆ ಎಂದು ಮಾಹಿತಿ ನೀಡಿದರು.
ಜಿ.ಪಂ. ಸಾಮಾಜಿಕ ನ್ಯಾಯಸಮಿತಿ ಮಾಜಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು, ಸದಸ್ಯೆ ಚೈತ್ರ ಬಿ. ಚೇತನ್, ಬಿ.ಎನ್. ಪ್ರಕಾಶ್, ನೂರೇರ ರತಿ ಅಚ್ಚಪ್ಪ, ಪುಷ್ಪಾ ಮನೋಜ್, ರಾಮಕೃಷ್ಣ ಭಟ್, ಕೊಣಿಯಂಡ ಬೋಜಮ್ಮ, ಶರತ್ ಕಾಂತ್, ವಿವೇಕ್ ರಾಯ್ಕರ್, ಹಕೀಮ್, ರಾಮ್‌ದಾಸ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ಗೋಣಿಕೊಪ್ಪ ನಗರ ಶಕ್ತಿ ಕೇಂದ್ರ ಪ್ರಮುಖ್ ಸುರೇಶ್‌ರೈ, ನೂರೇರ ರಂಜಿ, ಆರಾಧನಾ ಸಮಿತಿ ಜಿಲ್ಲಾ ಸದಸ್ಯ ಜಯ ಪೂವಯ್ಯ, ಮಾತೃಶಕ್ತಿ ತಾಲೂಕು ಸಂಚಾಲಕಿ ಧನಲಕ್ಷಿ÷್ಮ, ಮಾಜಿ ತಾ.ಪಂ. ಅಧ್ಯಕ್ಷೆ ರಾಣಿ ನಾರಾಯಣ, ಜಿ.ಪಂ. ಇಂಜಿನಿಯರ್ ಮಹಾದೇವ್, ಶಾಸಕರ ಆಪ್ತ ಕಾರ್ಯದರ್ಶಿ ಮಧು ದೇವಯ್ಯ, ಸಹಾಯಕ ಕಾರ್ಯದರ್ಶಿ ನರಸಿಂಹ, ಗುತ್ತಿಗೆದಾರರುಗಳಾದ ಟಿ.ಪಿ. ಪ್ರವೀಣ್, ಕೆ.ಯು. ತಿಮ್ಮಯ್ಯ ಹಾಜರಿದ್ದರು.