ವೀರಾಜಪೇಟೆ, ಡಿ. ೨೮: ಕದನೂರು - ಕೊಟ್ಟೋಳಿ ಕೊಡವ ಸಂಘದ ೧೯ನೇ ವರ್ಷದ ಮಹಾಸಭೆ - ಸಂತೋಷ ಕೂಟದಲ್ಲಿ ಅಖಿಲ ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಮಾತಂಡ ತಂಗಮ್ಮ, ಮಾಳೇಟಿರ ವಿಶಾಲ ಗೋಪಾಲ್ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಅಮ್ಮಣಿಚಂಡ ಸುಬ್ರಮಣಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್ ಮಾತನಾಡಿದರು. ಫ್ಯಾಷನ್ ಶೋ ನಡೆಯಿತು.