ಕೂಡಿಗೆ, ಡಿ. ೨೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಪುನರ್ವಸತಿ ಕೇಂದ್ರದ ಸಮುದಾಯ ಭವನದಲ್ಲಿ ಪಾಲಿಬೆಟ್ಟ, ಟಾಟಾ ಕಾಫಿ ಲಿಮಿಟೆಡ್ ಹಾಗೂ ಅಮ್ಮತ್ತಿಯ ಆರ್.ಐ.ಹೆಚ್.ಪಿ. ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಉದ್ಘಾಟನೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್ ನೆರವೇರಿಸಿ ಮಾತನಾಡಿ, ಗ್ರಾಮಸ್ಥರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆಯಿತ್ತರು.

ಈ ಸಂದರ್ಭ ಪುನರ್ವಸತಿ ಕೇಂದ್ರದ ಪ್ರಮುಖರಾದ ವೈ.ಸಿ. ಮುತ್ತ, ಪಿ.ಕೆ. ಮುತ್ತ, ಆಶಾ. ಗೌರಿ ಹಾಗೂ ಟಾಟಾ ಕಾಫಿ ಲಿಮಿಟೆಡ್ ಪಾಲಿಬೆಟ್ಟ ಮತ್ತು ಆರ್.ಐ.ಹೆಚ್.ಪಿ. ಆಸ್ಪತ್ರೆ ಅಮ್ಮತಿ ಹಾಗೂ ವೀರಾಜಪೇಟೆ ಡೆಂಟಲ್ ಕಾಲೇಜಿನ ವೈದ್ಯಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.