ಮಡಿಕೇರಿ, ಡಿ. ೨೮: ಮಡಿಕೇರಿಯ ದೇಚೂರು ಕೊಡವ ಕೇರಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಒತ್ತೋರ್ಮೆ ಕೂಟ ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಮೂವೆರ ಜಯರಾಂ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು. ಮುಖ್ಯ ಅತಿಥಿಗಳಾಗಿದ್ದ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರು ಕೊಡವ ಕೇರಿಗಳ ಅಗತ್ಯತೆ - ಸೇವೆಯ ಕುರಿತು ಮಾತನಾಡಿದರು.

ಸಂಘದ ಮಾಜಿ ಅಧ್ಯಕ್ಷ ಮಾದೆಯಂಡ ರವಿ ಕುಂಞಪ್ಪ ಅವರು ಸಂಘದ ಹಿಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರವಿತ್ತರು.

ಈ ಸಂದರ್ಭ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪಡೆದ ಮಂಡುವAಡ ಪಿ. ಮುತ್ತಪ್ಪ ಹಾಗೂ ಕೊಡವ ಸಮಾಜದ ನಿರ್ದೇಶಕರಾಗಿ ಆಯ್ಕೆಯಾಗಿರುವ ಕೇರಿಯ ಅಧ್ಯಕ್ಷ ಮೂವೆರ ಜಯರಾಂ ಅವರನ್ನು ಸನ್ಮಾನಿ ಸಲಾಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು. ತಾಪಂಡ ಹರ್ಷಿತ್ ಪ್ರಾರ್ಥಿಸಿ, ಸಮಿತಿ ಸದಸ್ಯ ಕುಂಞÂರ ಸೋಮಯ್ಯ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಬಡ್ಡೀರ ಎ. ಮೇದಪ್ಪ ಲೆಕ್ಕಪತ್ರ - ವರದಿ ಮಂಡಿಸಿದರು. ಮಾದೇಟಿರ ಬೆಳ್ಯಪ್ಪ ನಿರೂಪಿಸಿದರು.

ಕೇರಿಯ ಮುಖ್ಯಸ್ಥರಾದ ಮೇವಡ ನಾಣಯ್ಯ, ಕೊಕ್ಕೇಂಗಡ ಸೌಭಾಗ್ಯ ಪೊನ್ನಪ್ಪ ಹಾಗೂ ಸದಸ್ಯರು ಹಾಜರಿದ್ದರು.