ಮನು ಮುತ್ತಪ್ಪ
ನಾಪೋಕ್ಲು, ಡಿ. ೨೮: ಗುರು-ಶಿಷ್ಯರ ನಡುವೆ ಬಾಂಧವ್ಯವಿದ್ದರೆ ಭವಿಷ್ಯ ಕೂಡ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದು ನೇತಾಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಹೇಳಿದರು.
ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಒಂದು ವಾರಗಳ ಕಾಲ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಹಾಗೂ ಶಿಬಿರಾಧಿಕಾರಿಗಳು ಗ್ರಾಮೀಣ ಶಾಲೆಯ ಅಭಿವೃದ್ಧಿಗೆ ಸೇವೆ ಮಾಡಿದ್ದಾರೆ. ಕಾಲೇಜಿನಿಂದ ಉತ್ತಮ ಪ್ರತಿಭೆಗಳು ಹೊರಬರುವಂತಾಗಲಿ ಎಂದರು.
ನೇತಾಜಿ ವಿದ್ಯಾಸಂಸ್ಥೆಯ ನಿರ್ದೇಶಕ ಮುಕ್ಕಾಟಿರ ಎಂ. ವಿನಯ್ ಮಾತನಾಡಿ, ಶಿಬಿರದ ಅನುಭವಗಳು ಸಾಮಾಜಿಕ ಬದುಕಿಗೆ ನಾಂದಿಯಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಮೇಜರ್ ರಾಘವ ಮಾತನಾಡಿ, ರಾಷ್ಟಿçÃಯ ಸೇವಾ ಯೋಜನೆ ಘಟಕವು ಲೋಕ ಸೇವೆಗಾಗಿ, ರಾಷ್ಟç ನಿರ್ಮಾಣಕ್ಕಾಗಿ ಹಾಗೂ ರಾಷ್ಟಿçÃಯ ಭಾವೈಕ್ಯತೆಗಾಗಿ ಶ್ರಮಿಸುತ್ತದೆ ಎಂದರು.
ಬಲ್ಲಮಾವಟಿ ಗ್ರಾ.ಪಂ. ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ, ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಳೆಯಂಡ ಅಪ್ಪಚ್ಚು, ನೇತಾಜಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಸುತನ್ ಸುಬ್ಬಯ್ಯ, ಸದಸ್ಯರಾದ ಬಿ. ದೇವಿ ದೇವಯ್ಯ, ಗ್ರಾ.ಪಂ. ಸದಸ್ಯ ಎಂ. ರವೀಂದ್ರ ಮಾತನಾಡಿದರು.
ಶಿಬಿರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಶಿಬಿರಾರ್ಥಿಗಳನ್ನು ಗುರುತಿಸಿ, ನೆನಪಿನ ಕಾಣಿಕೆ ವಿತರಿಸಲಾಯಿತು. ಶಿಬಿರಾರ್ಥಿಗಳ ಪರವಾಗಿ ಸುಷ್ಮಾ, ವೈಷ್ಣವಿ ಮಾತನಾಡಿದರು.
ನೇತಾಜಿ ವಿದ್ಯಾಸಂಸ್ಥೆಯ ನಿರ್ದೇಶಕ ತಾಪಂಡ ವರುಣ್ ಸುಬ್ಬಯ್ಯ, ಅಪ್ಪುಮಣಿಯಂಡ ನವೀನ್, ಸಂಚಾಲಕ ನುಚ್ಚುಮಣಿಯಂಡ ಚಿಂಗಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಚೋಕಿರ ಬಾಬಿ ಭೀಮಯ್ಯ, ನೆಲಜಿ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯೆ ಚೀಯಕ ಪೂವಂಡ ರೀನ ವಿಠಲ, ಕೈಬುಲಿರ ಯಶೋಧ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಪ್ರದೀಪ್ ಭಂಡಾರಿ, ಶಿಬಿರಾಧಿಕಾರಿಗಳಾದ ಡಾ. ಗಾಯತ್ರಿ, ಡಾ. ಮಹದೇವಯ್ಯ, ಸಹ ಶಿಬಿರಾಧಿಕಾರಿಗಳಾದ ಎನ್.ಟಿ. ಸಚಿನ್, ಮಂಜುನಾಥ ಗೌಡ, ಖುರ್ಶಿದಾ ಬಾನು ಉಪಸ್ಥಿತರಿದ್ದರು.