ಪಾಲಿಬೆಟ್ಟ, ಡಿ. ೨೮: ಚೆನ್ನಯ್ಯನಕೋಟೆ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಮೇಕೇರಿರ ಡಿ. ಅರುಣ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಹೆಚ್. ಕಾವೇರಿ ಅವರುಗಳು ಆಯ್ಕೆಯಾಗಿದ್ದಾರೆ.
ಈ ಗ್ರಾ.ಪಂ.ನ ಪೂರ್ಣ ೫ ವರ್ಷಗಳ ಅವಧಿಗೆ ನವೆಂಬರ್ ೮ ರಂದು ಚುನಾವಣೆ ನಡೆದಿದ್ದು, ಒಟ್ಟು ೧೭ ಸದಸ್ಯ ಸ್ಥಾನದ ಪೈಕಿ ೧೬ರಲ್ಲಿ ಬಿಜೆಪಿ ಬೆಂಬಲಿಗರೇ ಆಯ್ಕೆಯಾಗಿದ್ದರು. ಇಂದು ನೂತನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಸಾಮಾನ್ಯ ಮೀಸಲಾತಿಯಲ್ಲಿ ಅಧ್ಯಕ್ಷರಾಗಿ ಅರುಣ್ ಕುಮಾರ್ ಹಾಗೂ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿಯಡಿ ಕಾವೇರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
ಪಕ್ಷ ಪ್ರಮುಖರುಗಳಾದ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್, ವಾಟೇರಿರ ಬೋಪಣ್ಣ, ಅಜ್ಜಿಕುಟ್ಟಿರ ಪ್ರವೀಣ್, ಕುಂಞAಗಡ ಅರುಣ್ ಭೀಮಯ್ಯ, ಸಿ.ಎ. ಮಾಚಯ್ಯ, ಚುನಾವಣಾ ಉಸ್ತುವಾರಿ ಕುಟ್ಟಂಡ ಅಜಿತ್ ಕರುಂಬಯ್ಯ, ಅಜ್ಜಿನಿಕಂಡ ಶ್ಯಾಮ್ ಚಂದ್ರ, ಅಪ್ಪು ಸುಬ್ರಮಣಿ ಮತ್ತಿತರರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದರು.
ಗ್ರಾ.ಪA.ನಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಧಿಕಾರಿಗಳಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಮೂರ್ತಿ, ಪಿಡಿಓ ಪ್ರಕಾಶ್ ಬಿ.ಪಿ. ಕಾರ್ಯನಿರ್ವಹಿಸಿದರು.