ಜನವರಿಯಲ್ಲಿ ದೇಶದಲ್ಲಿ ಕೊರೊನಾ ಹೆಚ್ಚಳ ಸಾಧ್ಯತೆ
ನವದೆಹಲಿ, ಡಿ. ೨೮: ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಉಲ್ಬಣಿಸಿರುವ ಕೊರೊನಾ ಸೋಂಕು ಇದೀಗ ಭಾರತದಲ್ಲೂ ಹೊಸ ಆಲೆಯ ಭೀತಿ ಸೃಷ್ಟಿ ಮಾಡಿದ್ದು, ಮುಂದಿನ ೪೦ ದಿನಗಳು ದೇಶಕ್ಕೆ ಅತ್ಯಂತ ನಿರ್ಣಾಯಕವಾಗಿರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ. ಕೇಂದ್ರ ಆರೋಗ್ಯ ಇಲಾಖೆಯ ಕೋವಿಡ್ ತಜ್ಞರ ಸಲಹಾ ಸಮಿತಿಯಲ್ಲಿ ನಡೆದ ಸಭೆಯ ಬಳಿಕ ಈ ಮಾಹಿತಿ ಹೊರಬಿದ್ದಿದ್ದು, ಮುಂದಿನ ತಿಂಗಳು ದೇಶದಲ್ಲಿ ಸೋಂಕು ಉತ್ತುಂಗಕ್ಕೇರಲಿದ್ದು ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಮುನ್ನೆಚ್ವರಿಕೆ ನೀಡಿದೆ. ‘ಜನವರಿಯಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣ ಹೆಚ್ಚಾಗಲಿದ್ದು ಮುಂದಿನ ೪೦ ದಿನಗಳು ನಿರ್ಣಾಯಕ. ದೇಶದಲ್ಲಿ ಸೋಂಕು ಉತ್ತುಂಗಕ್ಕೇರಿದರೂ ಜೊತೆಗೆ ಅಲೆ ಎದ್ದರೂ ಸಾವು ಮತ್ತು ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆ ತೀರಾ ಕಡಿಮೆ ಇರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಈ “ಹಿಂದೆ, ಕೋವಿಡ್ -೧೯ ರ ಹೊಸ ಅಲೆಯು ಪೂರ್ವ ಏಷ್ಯಾಕ್ಕೆ ಅಪ್ಪಳಿಸಿದ ೩೦-೩೫ ದಿನಗಳ ನಂತರ ಭಾರತ ಪ್ರವೇಶಿಸಿದ ಉದಾಹರಣ ಇದೆ. ಅದನ್ನು ಆದರಿಸಿ ತಜ್ಞರು ಈ ಎಚ್ಚರಿಕೆ ನೀಡಿದ್ದಾರೆ. ನಿರ್ಲಕ್ಷö್ಯ ವಹಿಸದೆ ಕೋವಿಡ್ ಮುನ್ನೆಚ್ಚರಿಕೆ ನಿರ್ವಹಿಸಿದರೆ ಪರಿಣಾಮ ಕಾರಿಯಾಗಿ ಪರಿಸ್ಥಿತಿ ಎದುರಿಸಬಹುದು. ಕೋವಿಡ್ ಉಪ ತಳಿ ಹೆಚ್ಚಳದಿಂದ ಸೋಂಕು ಹೆಚ್ಚಳ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಸೋಂಕಿನ ಅಲೆ ಹೆಚ್ಚಾದರೂ ಸೋಂಕಿನ ತೀವ್ರತೆ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್-೧೯ ಪ್ರಕರಣಗಳ ಹೆಚ್ಚಳದ ಮಧ್ಯೆ, ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ ಮತ್ತು ಯಾವುದೇ ಘಟನೆಗೆ ಸಿದ್ಧರಾಗುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ.
ರಾಜ್ಯದಲ್ಲಿ ೪೨,೦೦೦ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಕ್ರಮ
ಬೆಳಗಾವಿ, ಡಿ. ೨೮: ರಾಜ್ಯದಲ್ಲಿ ಸುಮಾರು ೪೨ ಸಾವಿರ ಪೌರ ಕಾರ್ಮಿಕರಿದ್ದು, ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಖಾಯಂ ನೇಮಕಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ೨೦೦೦ ರೂ. ಸಂಕಷ್ಟ ಭತ್ಯೆ ನೀಡಲಾಗುತ್ತಿದ್ದು, ಅವರ ಆರೋಗ್ಯ, ಅವರ ಮಕ್ಕಳ ಆರೋಗ್ಯ ಹಿತರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದರು. ಎಸ್‌ಸಿ-ಎಸ್‌ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಈ ನಿರ್ಣಯಕ್ಕೆ ಗಟ್ಟಿಯಾಗಿ ನಿಲ್ಲಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪೌರ ನೌಕರರ ಸೇವೆಯನ್ನು ಸರ್ಕಾರ ಗುರುತಿಸಿದೆ. ಬರುವ ದಿನಗಳಲ್ಲಿ ಪೌರನೌಕರರ ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಇದಕ್ಕೆ ಸರ್ಕಾರ ಎಲ್ಲ ಸಹಕಾರ ನೀಡುತ್ತದೆ ಎಂದು ಅವರು ತಿಳಿಸಿದರು. ಎಸ್‌ಸಿ-ಎಸ್‌ಟಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯನ್ನು ನೀಡುವಂತೆ, ಪೌರನೌಕರರ ಮಕ್ಕಳು ಸಿಇಟಿ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿಶೇಷ ತರಬೇತಿಯನ್ನು ನೀಡಲು ಸರ್ಕಾರ ಸಿದ್ಧವಿದೆ. ಪೌರಕಾರ್ಮಿಕರ ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣ, ಮನೆ ನಿರ್ಮಾಣಗಳಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಪೌರಕಾರ್ಮಿಕರ ಇವುಗಳ ಲಾಭವನ್ನು ಪಡೆಯಬೇಕು ಎಂದರು.
ಜಮ್ಮುವಿನಲ್ಲಿ ಎನ್‌ಕೌಂಟರ್: ನಾಲ್ವರು ಉಗ್ರರ ಸದೆಬಡಿದ ಸೇನಾಪಡೆ
ಜಮ್ಮು, ಡಿ. ೨೮: ಜಮ್ಮುವಿನ ಸಿದ್ರಾ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ಬುಧವಾರ ಎನ್‌ಕೌಂಟರ್ ನಡೆಸಿದ್ದು, ನಾಲ್ವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ. ಎನ್‌ಕೌಂಟರ್ ಕುರಿತು ಮಾಹಿತಿ ನೀಡಿರುವ ಎಜಿಡಿಪಿ ಮುಕೇಶ್ ಸಿಂಗ್ ಅವರು, ಹೆದ್ದಾರಿಯಲ್ಲಿ ಲಾರಿಯ ಸಂಚಾರವೊAದು ಅನುಮಾನಾಸ್ಪದವಾಗಿ ಕಂಡು ಬಂದಿತ್ತು. ಕೂಡಲೇ ಲಾರಿಯನ್ನು ಹಿಂಬಾಲಿಸಲಾಗಿತ್ತು. ಜಮ್ಮುವಿನ ಸಿಧ್ರಾ ಪ್ರದೇಶದಲ್ಲಿ ಲಾರಿ ನಿಂತಿತು. ಲಾರಿ ನಿಂತ ಕೂಡಲೇ ಚಾಲಕ ಪರಾರಿಯಾದ. ಲಾರಿಯನ್ನು ಪರಿಶೀಲಿಸಿದಾಗ ಉಗ್ರರು ಅಡಗಿ ಕುಳಿತಿರುವುದು ಕಂಡು ಬಂದಿತ್ತು. ಕೂಡಲೇ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದರು ಎಂದು ಹೇಳಿದ್ದಾರೆ. ಉಗ್ರರ ಬಳಿ ಭಾರೀ ಪ್ರಮಾಣದ ಶಸ್ತಾçಸ್ತçಗಳಿದ್ದವು. ಉಗ್ರರು ದಾಳಿ ನಡೆಸಲು ಆರಂಭಿಸುತ್ತಿದ್ದAತೆಯೇ ಸ್ಥಳವನ್ನು ಸುತ್ತುವರೆದು ಉಗ್ರರ ದಾಳಿಗೆ ದಿಟ್ಟ ಉತ್ತರ ನೀಡಲಾಯಿತು. ಇದರಂತೆ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮದ್ಯ ಪ್ರಿಯರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ!
ಬೆಂಗಳೂರು, ಡಿ. ೨೮: ಹೊಸ ವರ್ಷಾಚರಣೆ ವೇಳೆ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಬೆಂಗಳೂರು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಡಿಸೆಂಬರ್ ೩೧ರ ರಾತ್ರಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮುಳುಗಿ ತೇಲಾಡುವ ಮಂದಿಯನ್ನು ಸೇಫ್ಟಿಗೆ ಬೆಂಗಳೂರು ಪೊಲೀಸ್ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಯುವಕ, ಯುವತಿ ಸೇರಿದಂತೆ ಯಾರೇ ಕುಡಿದು ಟೈಟಾದರೂ ಅವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಡಿ. ೩೧ರ ರಾತ್ರಿ ಮಾತ್ರ ಈ ಸೇವೆ ಲಭ್ಯವಿರಲಿದೆ. ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ. ಬಾಬಾ ಅವರು ಈ ಮೂಲಕ ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೋರಮಂಗಲ, ಮಡಿವಾಳ, ಎಲೆಕ್ಟಾçನಿಕ್ ಸಿಟಿ, ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಸಂಪೂರ್ಣ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗ್ನೇಯ ವಿಭಾಗದಲ್ಲಿ ೧೦೮ ಪಬ್, ರೆಸ್ಟೋರೆಂಟ್‌ಗಳಿವೆ, ಪ್ರತಿಯೊಂದು ಪಬ್, ರೆಸ್ಟೋರೆಂಟ್ ಮುಂದೆಯೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಎಣ್ಣೆ ಹೊಡೆದು ಫುಲ್ ಟೈಟಾಗಿ ಪ್ರಜ್ಞೆ ತಪ್ಪಿ ಬೀಳುವವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿದ ಅಮಲಿನಲ್ಲಿ ಕುಣಿದು ಕುಪ್ಪಳಿಸಿ, ಗಾಯ ಮಾಡಿಕೊಂಡೋರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಅಥವಾ ಆಕಸ್ಮಿಕವಾಗಿ ಸೆಲೆಬ್ರೇಷನ್ ವೇಳೆ ಯಾರಿಗಾದ್ರು ಆರೋಗ್ಯ ತಪ್ಪಿದ್ರೆ ಪೊಲೀಸರಿಂದಲೇ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತೆ. ಕೂಡಲೇ ಆ್ಯಂಬುಲೆನ್ಸ್ನಲ್ಲಿ ಬಿದ್ದ ಕುಡುಕರನ್ನ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಹೆಚ್ಚು ಪೊಲೀಸ್ ಠಾಣೆಗಳ ನಿರ್ಮಾಣ:ಸಿಎಂ ಬೊಮ್ಮಾಯಿ
ಬೆಳಗಾವಿ, ಡಿ. ೨೮: ರಾಜ್ಯದಲ್ಲಿ ಒಂದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಳಗಾವಿ ಪೊಲೀಸ್ ಆಯುಕ್ತರ ನೂತನ ಕಚೇರಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಪೊಲೀಸ್ ಗೃಹ ಮಂಡಳಿಯಿAದ ರಾಜ್ಯಾದ್ಯಂತ ಒಳ್ಳೆಯ ಕೆಲಸ ಆಗುತ್ತಿದೆ.ರಾಜ್ಯದಲ್ಲಿ ೨೫೦೦ ಪೊಲೀಸ್ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ೧೬ ಪೊಲೀಸ್ ಠಾಣೆ ನಿರ್ಮಾಣದ ಹಂತದಲ್ಲಿವೆ. ಒಂದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸುಮಾರು ೮೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ೩೦೦ ಜೀಪ್ ಹಾಗೂ ಸ್ಕಾರ್ಪಿಯೊ ಖರೀದಿ ಮಾಡಲಾಗುತ್ತಿದೆ. ಡಿವೈಎಸ್ಪಿಗಳಿಗೆ ಸ್ಕಾರ್ಪಿಯೊ ವಾಹನಗಳನ್ನು ನೀಡಲಾಗುತ್ತಿದೆ ಎಂದರು. ಗೃಹ ಇಲಾಖೆ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಕರ್ನಾಟಕ ಪೊಲೀಸ್ ಪಡೆಗೆ ಅಭಿನಂದನೆ ಸಲ್ಲಿಸಿದ ಅವರು, ಗಡಿ ಭಾಗದಲ್ಲಿ ಕೇವಲ ಶಕ್ತಿ ಪ್ರದರ್ಶನ ಮಾಡುವುದಲ್ಲ. ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಗಡಿ ಭಾಗದ ಸಮಸ್ಯೆ ಪರಿಹರಿಸಿದರೆ ಹೆಚ್ಚು ಅನುಕೂಲ. ಇತ್ತೀಚೆಗೆ ವಿದ್ವಂಸಕ ಕೃತ್ಯಗಳು ನಡೆಯುತ್ತಿವೆ ಅವುಗಳನ್ನು ಅತ್ಯಂತ ವೇಗವಾಗಿ ಪತ್ತೆಹಚ್ಚುವ ಕೆಲಸ ಆಗುತ್ತಿದೆ. ದಕ್ಷತೆಯಿಂದ ನಮ್ಮ ಪೊಲಿಸರು ಕೆಲಸ ಮಾಡುತ್ತಿದ್ದಾರೆ. ನಾನು ಗೃಹ ಸಚಿವನಾಗಿದ್ದಾಗ ಅಡಿಗಲ್ಲು ಹಾಕಿದ ಕಟ್ಟಡಗಳು ಈಗ ಉದ್ಘಾಟನೆಯಾಗುತ್ತಿವೆ. ಎಫ್‌ಎಸ್‌ಎಲ್ ರಿಪೋರ್ಟ್ ೧೫ ದಿನದಲ್ಲಿ ಬಂದರೆ ಅಪರಾಧ ನಿಯಂತ್ರಣಕ್ಕೆ ಹೆಚ್ಚು ಅನುಕೂಲ ಆಗುತ್ತದೆ ಎಂದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಳಾ ಅಂಗಡಿ, ಶಾಸಕ ಅನಿಲ್ ಬೆನಕೆ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.