ಮಡಿಕೇರಿ, ಡಿ. ೨೮: ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಷ್ಟಿçÃಯ ರೈತ ದಿನಾಚರಣೆಯ ಅಂಗವಾಗಿ ಜಲ ಸಂಜೀವಿನಿ - ರೈತ ಸಂವಾದ ಕಾರ್ಯಕ್ರಮ ಕಡಗದಾಳು ಪಂಚಾಯಿತಿಯ ಅಮೃತ ಸರೋವರದ ದಂಡೆಯ ಮೇಲೆ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಜಯಣ್ಣ ಮಾತನಾಡಿ, ಗ್ರಾಮದ ರೈತರಿಗೆ ಜಲ ಸಂಪನ್ಮೂಲಗಳ ಮಹತ್ವದ ಬಗ್ಗೆ ತಿಳಿಸಿದರು. ನರೇಗಾ ಯೋಜನೆಯಡಿ ಕೈಗೊಳ್ಳಬಹುದಾದ ಜಲ ಸಂರಕ್ಷಣಾ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಿಕಾ ರೈತರಿಗೆ ನರೇಗಾ ಯೋಜನೆಯಡಿಯಲ್ಲಿರುವ ಕಾಮಗಾರಿಯ ಕುರಿತಾಗಿ ಮಾಹಿತಿಯಿತ್ತರು. ತಾಲೂಕು ಐ.ಇ.ಸಿ. ಸಂಯೋಜಕಿ ಅಕ್ಷಿತಾ, ಗ್ರಾ.ಪಂ. ತಾಂತ್ರಿಕ ಸಹಾಯಕಿ ನವಾನಿ ಇದ್ದರು.