ಮುಳ್ಳೂರು, ಡಿ. ೨೯: ಸಮೀಪದ ಕೊಡ್ಲಿಪೇಟೆ ಹೋಬಳಿ ಕಾಫಿ ಬೆಳೆಗಾರರ ಸಮಿತಿ ಅಸ್ತ್ತಿತ್ವಕ್ಕೆ ಬಂದಿದೆ. ಸಮಿತಿ ಅಧ್ಯಕ್ಷರಾಗಿ ಡಿ. ಭಗವಾನ್ ಅವರನ್ನು ಆಯ್ಕೆ ಮಾಡಲಾಗಿದೆ. ಕಾಫಿ ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಚ್.ಟಿ. ಮೋಹನ್‌ಕುಮಾರ್ ನೇತೃತ್ವದಲ್ಲಿ ರಾಜ್ಯ ಸಮಿತಿ ಪ್ರಮುಖರು ಎರಡು ತಿಂಗಳ ಹಿಂದೆ ಬೆಳೆಗಾರರ ಸಂಘಟನಾ ಸಭೆಯಲ್ಲಿ ಪಂಚಾಯಿತಿವಾರು ನಿರ್ದೇಶಕರನ್ನು ಮಾತ್ರ ಆಯ್ಕೆ ಮಾಡಿದ್ದರು, ಇದೀಗ ರಾಜ್ಯ ಸಮಿತಿ ಸೂಚನೆಯಂತೆ ಕೊಡ್ಲಿಪೇಟೆ ಹೋಬಳಿ ಕಾಫಿ ಬೆಳೆಗಾರರ ಸಮಿತಿಯನ್ನು ರಚಿಸಲಾಗಿದೆ. ಕೊಡ್ಲಿಪೇಟೆ ಬೆಲ್ಲದ್ ವೀಡಿಯೋ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಗಿದ್ದು ಸಮಿತಿಯ ನೂತನ ಪದಾಧಿಕಾರಿಗಳಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಡಿ.ಆರ್. ಪುರುಷೋತ್ತಮ್, ಸಹಕಾರ್ಯದರ್ಶಿಗಳಾಗಿ ಡಿ.ವಿ. ಭಾನುಪ್ರಕಾಶ್ ಮತ್ತು ಮಣಿಶಂಕರ್, ಖಜಾಂಜಿಯಾಗಿ ಸಲೀಂ ಸಿರಾಜ್ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಡಿ.ಎಂ. ದುಶ್ಯಂತ್ ಇವರನ್ನೊಳಗೊಂಡ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ಸಮಿತಿಯ ನೂತನ ನಿರ್ದೇಶಕರುಗಳಾಗಿ ಬಿ.ಕೆ. ಯತೀಶ್, ಕೆ.ಆರ್.ಚಂದ್ರಶೇಖರ್, ಕೆ.ಕೆ.ರೇಣುಕಾ, ಸಿ.ಬಿ.ಪ್ರಸನ್ನ, ಸಾಬ್‌ಜಾನ್, ಕೆ.ಎಸ್.ನಾಗರಾಜ್, ಎಚ್.ಎಂ.ರಾಜಶೇಖರ್, ಬಿ.ಬಿ.ಧರ್ಮಪ್ಪ, ಬಾಬು ರಾಜೇಂದ್ರಪ್ರಸಾದ್, ಸ್ವಾಮಿ, ಯು.ಎಂ.ಲೋಕೇಶ್, ಮಹಮ್ಮದ್ ಮುಷಾಹಿದ್, ಕುಮಾರಸ್ವಾಮಿ, ಪ್ರಭುಸ್ವಾಮಿ, ಬಿ.ಡಿ.ಜಗದೀಶ್, ಬಿ.ಕೆ.ದಿನೇಶ್, ಶರತ್‌ಚಂದ್ರ ಮತ್ತು ಬಿ.ಯು.ಲತೀಫ್ ಇವರುಗಳನ್ನು ನೇಮಕ ಮಾಡಲಾಯಿತು.

ನಂತರ ನಡೆದ ಸಭೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆ ಮತ್ತು ಬೇಕು ಬೇಡಿಕೆಗಳ ಪರವಾಗಿ ಎಲ್ಲರೂ ಪಕ್ಷಾತೀತವಾಗಿ ಸಂಘಟಿತರಾಗಿ ಹೋರಾಟ ಮಾಡುವುದು,. ಇನ್ನು ಮುಂತಾದ ನಿರ್ಣಯಗಳನ್ನು ಕೈಗೊಳ್ಳಲಾಯಿತು.