ಡಾ ಶ್ರೀನಿವಾಸ್ ಮಾಹಿತಿ
ವೀರಾಜಪೇಟೆ, ಡಿ. ೨೯: ಕೋವಿಡ್ ರೂಪಾಂತರಿ ವೈರಾಣು ತೀರಾ ಅಪಾಯಕಾರಿ ಅಲ್ಲದಿದ್ದರು ಜನರು ಜಾಗೃತೆ ವಹಿಸಬೇಕು. ಬೂಸ್ಟರ್ ಡೋಸ್ ಲಸಿಕೆ ಪಡೆಯದವರು ತಕ್ಷಣ ಬೂಸ್ಟರ್ ಲಸಿಕೆ ಪಡೆಯಿರಿ. ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಹೇಳಿದರು.
ಪತ್ರಿಕೆಗೆ ಮಾಹಿತಿ ನೀಡಿದ ಅವರು ನಮ್ಮಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು ಎರಡು ಲಸಿಕೆ ಹಾಕಿಸಿಕೊಂಡವರು ಬೂಸ್ಟರ್ ಡೋಸ್ ಪಡೆಯಬಹುದು. ಕೋವಿಶೀಲ್ಡ್ ಲಸಿಕೆಯನ್ನು ಶೀಘ್ರವಾಗಿ ಪೂರೈಕೆ ಮಾಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ. ಕೋವಿಡ್ಗೆ ಸಂಬAಧಿಸಿದAತೆ ಐಸಿಯುನಲ್ಲಿ ೨೪ ಆಕ್ಸಿಜನ್ ಹಾಸಿಗೆಗಳು, ಸಾಮಾನ್ಯ ವಾರ್ಡಿನಲ್ಲಿ ೭೨ ಆಕ್ಸಿಜನ್ ಇರುವ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಆಸ್ಪತ್ರೆಯ ಆವರಣದಲ್ಲಿರುವ ಆಕ್ಸಿಜನ್ ಘಟಕವನ್ನು ಚಾಲನೆ ಮಾಡಲಾಗಿದ್ದು ಆಕ್ಸಿಜನ್ಗೆ ಕೊರತೆ ಇಲ್ಲ. ೪೪೮ ಪಿ.ಪಿ ಕಿಟ್, ಮಾಸ್ಕ್ ಸೇರಿದಂತೆ ಔಷಧಿಗಳು ಲಭ್ಯ ಇದ್ದು ಒಂದು ತಿಂಗಳ ಬಳಕೆಗೆ ಅಗತ್ಯ ದಾಸ್ತಾನು ಇದೆ.
ಕೋವಿಡ್ ರೋಗಿಗಳಿಗೆ ಅಗತ್ಯ ಸೇವೆಗಳಿಗೆ ಯಾವ ತೊಂದರೆ ಇಲ್ಲ. ಅಗತ್ಯ ಬಿದ್ದರೆ ರೋಗಿಗಳಿಗೆ ನಿತ್ಯ ಬಳಕೆ ತುರ್ತು ಚಿಕಿತ್ಸಾ ವಾಹನ, ೧೦೮ ಸೇವೆಯ ವಾಹನ, ನಗುಮಗು ವಾಹನ ಸೇರಿದಂತೆ ಮೂರು ತುರ್ತು ಚಿಕಿತ್ಸಾ ವಾಹನ ಬಳಕೆಗೆ ಲಭ್ಯವಿದೆ. ರೂಪಾಂತರಿ ವೈರಸ್ ಬೇಗನೆ ಹರಡಿದರು ಅಂತಹ ತೀವ್ರತೆ ಇಲ್ಲ. ಆದರೂ ಸರಕಾರದ ನಿಯಮದಂತೆ ಅಂತರ ಪಾಲನೆ ಜೊತೆಗೆ ಸಮಾರಂಭದಲ್ಲಿ ಮಾಸ್ಕ್ ಧರಿಸಬೇಕು. ಯಾವುದೇ ತೊಂದರೆ ಕಾಣಿಸಿಕೊಂಡರೂ ತಕ್ಷಣ ವೈದ್ಯರ ಸಲಹೆ ಪಡೆಯಬೇಕು ಎಂದು ಡಾ. ಶ್ರೀನಿವಾಸ್ ಹೇಳಿದರು.