ಅಮ್ಮತ್ತಿ, ಡಿ. 22: ಅಮ್ಮತ್ತಿ ನಿವಾಸಿ ಮಹಮ್ಮದ್ ಅವರ ಮನೆಯಲ್ಲಿ ಅಡಗಿಕೊಂಡಿದ್ದ ಸುಮಾರು 5 ಅಡಿಗಿಂತ ಉದ್ದವಿದ್ದ ಗೋಧಿ ನಾಗರ ಹಾವನ್ನು ಅಮ್ಮತ್ತಿ ಉರಗ ರಕ್ಷಕರಾದ ಸಜೀರ್ ಮತ್ತು ಸತೀಶ್ ಅವರು ಸುರಕ್ಷಿತವಾಗಿ ಸೆರೆ ಹಿಡಿದು ಮಾಲ್ದಾರೆಯ ಅರಣ್ಯಕ್ಕೆ ಬಿಡಲಾಯಿತು. ಎಲ್ಲಿಯಾದರು ಹಾವುಗಳು ಕಂಡುಬಂದರೆ ಅದನ್ನು ಕೊಲ್ಲದೆ ತನಗೆ ಕರೆ (9535553315) ಮಾಡುವಂತೆ ಸಜೀರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.