ಶನಿವಾರಸAತೆ, ಡಿ. ೨೩: ಶನಿವಾರಸಂತೆ ಗಿರಿಜನ ಹಾಡಿಯ ಹೆಣ್ಣುಮಕ್ಕಳು ತಮ್ಮ ಪರಿಸರದ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದು, ಗರ್ಭಿಣಿಯರು ತಮ್ಮ ಉದರದಲ್ಲಿ ಶಿಶು ಇರುವಾಗಲೇ ಆ ಶಿಶುವಿನ ಆರೋಗ್ಯದ ಬಗ್ಗೆ ಜಾಗ್ರತೆ ಹೊಂದಿರಬೇಕು ಎಂದು ಶನಿವಾರಸಂತೆ ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಪಿ. ಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಅರಸಿನಗುಪ್ಪೆ ರೋಟರಿ ಸಂಸ್ಥೆ ಅಧ್ಯಕ್ಷ ಬೇಬಿ ಮ್ಯಾಥ್ಯು ಅವರ ತೋಟದ ಮನೆಯ ಸಭಾಂಗಣದಲ್ಲಿ ಶನಿವಾರಸಂತೆ ರೋಟರಿ ಸಂಸ್ಥೆ, ಆಲೂರುಸಿದ್ದಾಪುರ ಮಲ್ಲೇಶ್ವರ ರೋಟರಿ ಸಂಸ್ಥೆ ಹಾಗೂ ಜಿಲ್ಲಾ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಬಳಗದ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆದ ಗಿರಿಜನ ಹಾಡಿ ಗರ್ಭಿಣಿಯರಿಗೆ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿಯರಾದ ನಮೀತಾ ಮತ್ತು ಅನುಶ್ರೀ ಮಾತನಾಡಿ, ಗರ್ಭಿಣಿ ಸ್ತಿçÃಯರು ಆರೋಗ್ಯ ಮುಂಜಾಗ್ರತೆ, ಶುಚಿತ್ವ ಹಾಗೂ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗಿರಿಜನ ಹಾಡಿಯ ೧೨ ಮಂದಿ ಗರ್ಭಿಣಿಯರಿಗೆ ಸೀಮಂತ ಮಾಡಿ ಗೌರವಿಸಲಾಯಿತು. ರೋಟರಿ ವಲಯ ಸೇನಾನಿ ಎಚ್.ವಿ. ದಿವಾಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಬಳಗದ ಅಧ್ಯಕ್ಷ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಂಸ್ಥೆಗಳ ಪ್ರಮುಖರಾದ ಎಚ್.ಎಂ. ಮನೋಹರ್, ಎಂ.ಡಿ. ಲಿಖಿತ್, ಅಂಕಾಚಾರ್, ಎಚ್.ಎಸ್. ವಸಂತ್, ಶ್ವೇತಾವಸಂತ್, ಉದಯಕುಮಾರ್, ಎ.ಎಸ್. ರಾಮಣ್ಣ, ವೈಶಾಲಿ, ಕುಸುಮಾ, ಹೇಂತ್, ಕಿರಣ್, ವೆಂಕಟೇಶ್ ಹಾಜರಿದ್ದರು.