ಶನಿವಾರಸಂತೆ, ಡಿ. ೨೩: ಪಟ್ಟಣದಲ್ಲಿ ಹಲವು ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಗ್ರಾ.ಪಂ.ಗೆ ಬಹುದೊಡ್ಡ ಸಮಸ್ಯೆಯಾಗಿ ಉಳಿದುಕೊಂಡಿತ್ತು. ಈಗ ಈ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಶನಿವಾರಸಂತೆ ಗ್ರಾ.ಪಂ. ಆಡಳಿತ ಮಂಡಳಿಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಕಸ ವಿಲೇವಾರಿ ಸಮಸ್ಯೆ ಬಗ್ಗೆ ನಡೆಸಲಾದ ಚರ್ಚೆಯಲ್ಲಿ ಕಲವಿಲೇವಾರಿಗಾಗಿ ಗೊತ್ತು ಮಾಡಿರುವ ಜಾಗದಲ್ಲಿ ಗ್ರಾ.ಪಂ. ನಿರ್ಮಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ಹಂತದಲ್ಲಿದ್ದು, ಕಾಮಗಾರಿ ಮುಗಿದ ಕೂಡಲೇ ಅಲ್ಲೇ ಕಸ ವಿಲೇವಾರಿ ಮಾಡುವಂತೆ ತೀರ್ಮಾನಿಸಲಾಯಿತು.

ಪಟ್ಟಣದ ತ್ಯಾಜ್ಯ ವಿಲೇವಾರಿಗಾಗಿ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರ ನನ್ನು ಸಭೆಗೆ ಕರೆಸಿಕೊಂಡು ಒಣ-ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಕ್ರಮಬದ್ಧವಾಗಿ ವಿಲೇವಾರಿ ಮಾಡುವಂತೆ ಗ್ರಾ.ಪಂ. ಸದಸ್ಯರು ಮತ್ತು ಪಿಡಿಓ ಸೂಚಿಸಿದರು.

ಸಭೆಯಲ್ಲಿ ಗ್ರಾ.ಪಂ.ಗೆ ಸೇರಿದ ೪ ಸೆಂಟು ಜಾಗ ೯೪-ಸಿ ಅಡಿಯಲ್ಲಿ ಮೀಸಲಿಟ್ಟಿದ್ದ ಜಾಗವನ್ನು ಐದಾರು ವರ್ಷಗಳ ಹಿಂದೆ ಒಬ್ಬರು ಅಧಿಕಾರಿಗಳ ಹಸ್ತಕ್ಷೇಪದಿಂದ ವಾಣಿಜ್ಯ ಉದ್ದೇಶಿತ ಭೂಪರಿವರ್ತನೆ ಮಾಡಿಕೊಂಡಿದ್ದರು. ಕಳೆದ ೨ ವರ್ಷಗಳ ಹಿಂದೆ ಗ್ರಾ.ಪಂ. ಆಡಳಿತಾಧಿಕಾರಿಯ ಆಡಳಿತ ಸಂದರ್ಭ ವಾಣಿಜ್ಯ ಉದ್ದೇಶಿತ ಕಟ್ಟಡ ನಿರ್ಮಾಣಕ್ಕಾಗಿ ಪರವಾನಗಿ ನೀಡಿತ್ತು. ಈ ವಿಚಾರಕ್ಕೆ ಸಂಬAಧಪಟ್ಟAತೆ ನಡೆದ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರಾದ ಎಸ್.ಎನ್. ರಘು, ಸರ್ದಾರ್ ಅಹಮ್ಮದ್, ಆದಿತ್ಯಗೌಡ ಅವರುಗಳು ಗ್ರಾ.ಪಂ.ಗೆ ಸೇರಿದ ೯೪-ಸಿ ಜಾಗದಲ್ಲಿ (ಬಡವರಿಗೆ ನಿವೇಶನ, ಅಂಗನವಾಡಿ ಕಟ್ಟಡ ಮುಂತಾದವುಗಳಿಗೆ ಮೀಸಲಿರುವ ಜಾಗ) ವಾಣಿಜ್ಯ ಉದ್ದೇಶಿತ ಕಟ್ಟಡ ನಿರ್ಮಾಣಕ್ಕಾಗಿ ಆಗ ಗ್ರಾ.ಪಂ.ನಿAದ ಪರವಾನಗಿ ನೀಡಿರುವ ಗಂಭೀರವಾದ ವಿಚಾರವನ್ನು ನಮಗೆ ತಡವಾಗಿ ಮಾಹಿತಿ ನೀಡಿದ್ದೀರಾ ಎಂದು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ವಾಣಿಜ್ಯ ಉದ್ದೇಶಿತ ಕಟ್ಟಡಕ್ಕಾಗಿ ಈ ಹಿಂದೆ ನೀಡಿದ್ದ ಪರವಾನಗಿಯನ್ನು ರದ್ದುಗೊಳಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪಟ್ಟಣದ ಅಭಿವೃದ್ಧಿಯ ಹಿತದೃಷ್ಠಿಯಿಂದ ಇನ್ನು ಮುಂದೆ ಗ್ರಾ.ಪಂ. ಆಡಳಿತ ಮಂಡಳಿ ಸಭೆಯನ್ನು ಪ್ರತಿ ತಿಂಗಳ ಮೊದಲ ವಾರದಲ್ಲಿ ನಡೆಸುವುದು ಮತ್ತು ಪ್ರತಿ ತಿಂಗಳು ತುರ್ತು ಸಭೆಯನ್ನು ನಡೆಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಾರ್ವಜನಿಕರ ಅರ್ಜಿ ಅಹವಾಲುಗಳನ್ನು ವಿಲೇವಾರಿ ಮಾಡಲಾಯಿತು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎಸ್.ಎನ್. ರಘು, ಎಸ್.ಸಿ. ಶರತ್‌ಶೇಖರ್, ಸರ್ದಾರ್ ಅಹಮ್ಮದ್, ಎನ್.ಎ. ಆದಿತ್ಯಗೌಡ, ಗೀತ ಹರೀಶ್, ಸರೋಜ ಶೇಖರ್, ಕಾವೇರಿ, ಸರಸ್ವತಿ, ಪಿಡಿಓ ಮೇದಪ್ಪ, ಕಾರ್ಯದರ್ಶಿ ದೇವರಾಜ್, ಲೆಕ್ಕಾಧಿಕಾರಿ ಲೀಲಾ, ಗ್ರಾ.ಪಂ. ಸಿಬ್ಬಂದಿ ಪೌಜಿಯ ಹಾಜರಿದ್ದರು.