ಮಡಿಕೇರಿ, ಡಿ. ೨೦: ಮಹಿಳೆಯೋರ್ವರ ಸರ ಹಾಗೂ ಮೊಬೈಲ್ ಅಪಹರಿಸಿದ್ದ ಪ್ರಕರಣದ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ೨೦೧೯ರಲ್ಲಿ ಮಡಿಕೇರಿ ನಗರದಲ್ಲಿ ಹಳೇ ಖಾಸಗಿ ಬಸ್ ನಿಲ್ದಾಣದ ಹಾಲಿನ ಡೈರಿ ಹಿಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸೌಮ್ಯ ಎಂಬವರ ಕತ್ತಿನಿಂದ ತ್ಯಾಗರಾಜ ನಗರದ ನಿವಾಸಿ ಅವಿನಾಶ್ ಎಂಬಾತ ಚಿನ್ನದ ಸರ ಹಾಗೂ ಅವರ ಬಳಿಯಿದ್ದ ಮೊಬೈಲ್

ಸರ ಅಪಹರಣ ಪ್ರಕರಣ : ಆರೋಪಿಗೆ ಶಿಕ್ಷೆ

(ಮೊದಲ ಪುಟದಿಂದ) ಕಿತ್ತುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ದೊರೆತ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಅವಿನಾಶ್‌ನನ್ನು ಬಂಧಿಸಿದ ಆಗಿನ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆದಿದ್ದು, ಇದೀಗ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ೧ನೇ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಶಾಂತಿ ಜಿ.ಅವರು ಆರೋಪಿಗೆ ಒಟ್ಟು ೭ ವರ್ಷ ಜೈಲು ಶಿಕ್ಷೆ ಹಾಗೂ ವಿವಿಧ ಸೆಕ್ಷನ್‌ನಂತೆ ಆರೋಪಕ್ಕೆ ರೂ. ೧೫ ಸಾವಿರ ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ ಮತ್ತೆ ೬ ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.