ವೀರಾಜಪೇಟೆ, ಡಿ. ೨೦: ಜಿಲ್ಲೆಯ ಗೌತಮ್ ಎಸ್. ಹಾಗೂ ಸಚಿನ್ ಎನ್.ಕೆ. ರಗ್ಬಿ ಸಬ್ ಜೂನಿಯರ್ ತಂಡದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕ ರಗ್ಬಿ ಫುಟ್ಬಾಲ್ ಯೂನಿಯನ್ ಪ್ರಕಟಿಸಿರುವ ೧೨ ಮಂದಿಯ ತಂಡದಲ್ಲಿ ಜಿಲ್ಲೆಯ ಇಬ್ಬರು ಸ್ಥಾನ ಪಡೆದಿದ್ದಾರೆ. ರಾಷ್ಟçಮಟ್ಟದ ಪಂದ್ಯಾಟ ಗುಜರಾತಿನ ಗಾಂಧಿನಗರದಲ್ಲಿ ತಾ. ೨೧ ಹಾಗೂ ೨೨ ರಂದು ನಡೆಯಲಿದೆ. ಕೆಲವು ದಿನಗಳ ಹಿಂದೆ ನಡೆದ ರಾಜ್ಯಮಟ್ಟದ ಟೂರ್ನಿಯಲ್ಲಿ ಕೊಡಗಿನ ತಂಡವು ಪ್ರಶಸ್ತಿಯನ್ನು ಪಡೆದಿತು. ಇವರಿಗೆ ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ತರಬೇತಿ ನೀಡುತ್ತಿದ್ದಾರೆ.