ಪೊನ್ನಂಪೇಟೆ, ಡಿ.೨೦ : ಬಿಟ್ಟಂಗಾಲ ಸಮೀಪದ ಕಂಡAಗಾಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕುತ್ತುನಾಡು ಮತ್ತು ಬೇರಳಿನಾಡು ವ್ಯಾಪ್ತಿಯ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ೮ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ತಾ. ೨೧ ರಂದು (ಇಂದು) ನಡೆಯಲಿರುವ ಕ್ವಾರ್ಟರ್ ಫೈನಲ್ಸ್ ಪಂದ್ಯಾವಳಿಯಲ್ಲಿ ಈ ೮ ತಂಡಗಳು ಸೆಣೆಸಾಡಲಿವೆ.

ಕಂಡAಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಸೋಮವಾರದಿಂದ ಆರಂಭಗೊAಡ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಪಾಲ್ಗೊಂಡಿದ್ದ ತಂಡಗಳು ಎದುರಾಳಿ ತಂಡಗಳನ್ನು ಸೋಲಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.

ಮAಗಳವಾರದAದು ನಡೆದ ಪಂದ್ಯಾವಳಿಯಲ್ಲಿ ಅಪ್ಪಂಡೇರAಡ ತಂಡವು ಮುಲ್ಲೇಂಗಡ ತಂಡವನ್ನು ೪-೧ ಗೋಲುಗಳಿಂದ, ಚಂದುರ ತಂಡ ನಾಮೆರ ತಂಡವನ್ನು ೨-೦ ಗೋಲುಗಳಿಂದ, ಕೊಂಗAಡ ತಂಡ ಮಂದಮಾಡ ತಂಡವನ್ನು ೭-೨ ಗೋಲುಗಳಿಂದ, ಮೂಕಚಂಡ ತಂಡ ಚೇಂದಿರ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತು. ಬಲ್ಲಡಿಚಂಡ ಮತ್ತು ಕಾಳೆಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ಬಲ್ಲಡಿಚಂಡ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಮತ್ತೊಂದು ಪಂದ್ಯಾವಳಿಯಲ್ಲಿ ಅಪ್ಪಂಡೇರAಡ ತಂಡ ತೀತಿಮಾಡ ತಂಡವನ್ನು ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಮಣಿಸಿತು.

ಮೊದಲ ದಿನದ ಪಂದ್ಯಾವಳಿಯಲ್ಲಿ

(ಮೊದಲ ಪುಟದಿಂದ) ತೀತಿಮಾಡ, ನಾಮೆರ, ಕಡೇಮಾಡ, ಮೇಚಿಯಂಡ ಹಾಗೂ ಮಳವಂಡ ತಂಡ ವಿಜಯಗಳಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿತ್ತು.

ಸೋಮವಾರದAದು ನಡೆದ ಕಾರ್ಯಕ್ರಮದಲ್ಲಿ ರುದ್ರಗುಪ್ಪೆ ವಿ.ಎಸ್. ಎಸ್. ಎನ್. ಬ್ಯಾಂಕ್ ಉಪಾಧ್ಯಕ್ಷರಾದ ಕೊಂಗAಡ ಎಂ. ದೇವಯ್ಯ ಅವರು ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿದ್ದರು. ರುದ್ರಗುಪ್ಪೆ ವಿ.ಎಸ್.ಎಸ್. ಎನ್. ಬ್ಯಾಂಕ್ ಅಧ್ಯಕ್ಷ ಕೊಂಗAಡ ವಾಸು ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಪಿ. ನಾಗೇಶ್, ಬಿಟ್ಟಂಗಾಲ ಗ್ರಾ. ಪಂ. ಸದಸ್ಯರುಗಳಾದ ಮೂಕಚಂಡ ಪ್ರಸನ್ನ ಸುಬ್ಬಯ್ಯ, ಜೆನಿತ, ಅವ್ವಿ, ಕಂಡAಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹದೇವ, ಶಾಲಾ ಮುಖ್ಯೋಪಾಧ್ಯಾಯರಾದ ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.

ಕ್ರೀಡಾ ಸಮಿತಿ ಅಧ್ಯಕ್ಷ ಬಿಟ್ಟಂಗಾಲ ಗ್ರಾ. ಪಂ. ಸದಸ್ಯರುಗಳಾದ ಮೂಕಚಂಡ ಪ್ರಸನ್ನ ಸುಬ್ಬಯ್ಯ, ಜೆನಿತ, ಅವ್ವಿ, ಕಂಡAಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹದೇವ, ಶಾಲಾ ಮುಖ್ಯೋಪಾಧ್ಯಾಯರಾದ ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.

ಕ್ರೀಡಾ ಸಮಿತಿ ಅಧ್ಯಕ್ಷ ಮುಲ್ಲೇಂಗಡ ಸಿ. ಅಶೋಕ್, ಪಂದ್ಯಾವಳಿಯ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ, ಕ್ರೀಡಾ ಸಮಿತಿಯ ಪ್ರಮುಖರಾದ ಮುಲ್ಲೇಂಗಡ ನಟ್ಟು ನಾಚಪ್ಪ, ಮೇಚಿಯಂಡ ಅಪ್ಪುಟ ಮೊದಲಾದವರು ಉಪಸ್ಥಿತರಿದ್ದರು. ಮಾಳೇಟಿರ ಶ್ರೀನಿವಾಸ್ ಅವರು ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ನೀಡಿದರು.