ಮಡಿಕೇರಿ, ಡಿ. ೨೦: ನಾಲ್ಕು ಮರಗಳನ್ನು ಕಡಿದು ಸಾಗಾಟ ಮಾಡಲು ಸರಕಾದ ಅನುಮತಿ., ಆದರೆ., ಕೇರಳಕ್ಕೆ ಸಾಗಾಟವಾಗಿರುವದು ಲೆಕ್ಕವಿಲ್ಲದಷ್ಟು ಮರಗಳು., ಕಚೇರಿಯಲ್ಲಿನ ಕಡತದಲ್ಲಿ ಒಂದು ಲೆಕ್ಕಚಾರವಾದರೆ., ಲಾರಿಯಲ್ಲಿ ಕೇರಳಕ್ಕೆ ಸಾಗಾಟವಾಗಿರುವುದರಲ್ಲಿ ಬೇರೆಯೇ ಲೆಕ್ಕ..! ಇದು ಯಾರೋ ಕೆಳದರ್ಜೆಯ ಸಿಬ್ಬಂದಿಗಳು ಮಾಡಿರುವ ಲೆಕ್ಕಚಾರವಲ್ಲ., ಜವಾಬ್ದಾರಿಯುತ ಸ್ಥಾನದಲ್ಲಿರುವ ಅರಣ್ಯ ಇಲಾಖಾ ಅಧಿಕಾರಿಯ ಕೈಚಳಕದ ಕರಾಮತ್ತು..! ೨೦೧೫-೧೬ರಲ್ಲಿ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇಲಾಖಾ ಮಟ್ಟದ ತನಿಖೆಯ ಹಾದಿಯಲ್ಲಿದೆ..!
ಮಡಿಕೇರಿ ತಾಲೂಕು ಮದೆನಾಡು ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಮರ ಸಾಗಾಟ ಮಾಡಲು ಮಂಜೂರಾದ ಸರಕಾರದ ಪರವಾನಗಿಯನ್ನು ತಿದ್ದುಪಡಿ ಮಾಡಿ ಅಧಿಕಾರಿಯೋರ್ವರು ನಕಲಿ ಸಹಿ ಹಾಗೂ ಮುದ್ರೆ ಬಳಸಿ ಅಕ್ರಮವಾಗಿ ಹೆಚ್ಚಿಗೆ ಮರಗಳನ್ನು ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿ ಸಂಬAಧಿಸಿದ ಅಧಿಕಾರಿಯ ಭತ್ಯೆಗೂ ಕಡಿವಾಣ ಹಾಕಲಾಗಿದೆ. ಆದರೂ ಅಧಿಕಾರಿ ಪ್ರಭಾವ ಬಳಸಿ ಕರ್ತವ್ಯದಲ್ಲಿ ಮುಂದುವರೆದಿದ್ದು, ಇದೀಗ ಮತ್ತೆ ಹಿರಿಯ ಅಧಿಕಾರಿಯೋರ್ವರು ತನಿಖೆ ಕೈಗೆತ್ತಿಕೊಂಡಿದ್ದು, ಪ್ರಕರಣಕ್ಕೆ ಮರುಜೀವ ಬಂದAತಾಗಿದೆ..!ಎರಡೆರಡು ಪ್ರತಿಗಳು..!
ಸಾಮಾನ್ಯವಾಗಿ ಒಂದು ಮರ ಕಡಿದು ಸಾಗಾಟ ಮಾಡಲು ಒಂದು ರಹದಾರಿಯ ಪ್ರತಿಗಳನ್ನು ಮಾತ್ರ ನೀಡಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಅಧಿಕಾರಿ ಮೂಲ ಪ್ರತಿಯಲ್ಲಿ ಒಂದು ರೀತಿಯಾಗಿ ದಾಖಲಿಸಿದ್ದರೆ, ಮತ್ತೊಂದು ನಕಲಿ ಪ್ರತಿಯಲ್ಲಿ ಇನ್ನೊಂದು ರೀತಿಯಾಗಿ ದಾಖಲು ಮಾಡಿದ್ದಾರೆ. ಮೂಲ ಪ್ರತಿಯನ್ನು ಇಲಾಖಾ ಕಚೇರಿಯಲ್ಲಿ ಇಟ್ಟುಕೊಂಡಿದ್ದು, ನಕಲಿ ಪ್ರತಿಯ ಮೂಲಕ ಹೆಚ್ಚಿಗೆ ಮರಗಳನ್ನು ನೆರೆಯ ಕೇರಳ ರಾಜ್ಯಕ್ಕೆ ಸಾಗಾಟ ಮಾಡಿದ್ದಾರೆ. ಈ ಸಂಬAಧ ದೂರುಗಳು ಬಂದ ಹಿನ್ನೆಲೆಯಲ್ಲಿ ಅಂದಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಆಗಿನ ಅರಣ್ಯ ಸಂಚಾರಿ ದಳದ (ಜಾಗೃತ) ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದ ರೋಶನಿ ಅವರು ಸುಮಾರು ೨೧ ಪುಟಗಳ ತನಿಖಾ ವರದಿಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಿದ್ದರು. ಆದರೂ ಯಾವುದೇ ಕ್ರಮ ಜರುಗದ ಹಿನ್ನೆಲೆಯಲ್ಲಿ ಇದೀಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿರುವ ಎ.ಟಿ. ಪೂವಯ್ಯ ಅವರ ನೇತೃತ್ವದಲ್ಲಿ ಮತ್ತೆ ತನಿಖೆಗೆ ಜೀವ ತುಂಬಲಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಮಡಿಕೇರಿ ಉಪ ವಲಯದ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ, ಇದೀಗ ಸಂಶೋಧನೆ ವಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿ ಯಾಗಿರುವ ಪಿ.ಜೆ. ರಾಘವ ಎಂಬವರೇ ಅಕ್ರಮ ಮರಸಾಗಾಟದಲ್ಲಿ ಭಾಗಿಯಾಗಿ
ತನಿಖೆ ಎದುರಿಸುತ್ತಿರುವ ಅಧಿಕಾರಿಯಾಗಿದ್ದಾರೆ..!
?ಕುಡೆಕಲ್ ಸಂತೋಷ್