ಚೀನಾದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಬೀಜಿಂಗ್, ಡಿ. ೨೦: ಜಾಗತಿಕ ಮಟ್ಟದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದರೆ, ಚೀನಾದಲ್ಲಿ ಮಾತ್ರ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿದೆ. ಅಲ್ಲಿನ ಸರ್ಕಾರ ಶೂನ್ಯ ಕೋವಿಡ್ ನೀತಿಯನ್ನು ಘೋಷಿಸಿದ್ದು, ಕಠಿಣ ಲಾಕ್‌ಡೌನ್ ನಿರ್ಬಂಧಗಳನ್ನು ವಿಧಿಸಿತ್ತು. ತೀವ್ರ ವಿರೋಧದ ಬಳಿಕ ಸರ್ಕಾರ ತನ್ನ ನೀತಿಯನ್ನು ಪರಿಷ್ಕರಿಸಿತ್ತು. ಈ ಬಳಿಕ ಕೋವಿಡ್-೧೯ ಪ್ರಕರಣಗಳು ಏರುಗತಿಯಲ್ಲಿ ವರದಿಯಾಗುತ್ತಿವೆ. ಹೆಚ್ಚುತ್ತಿರುವ ಸೋಂಕುಗಳಿAದಾಗಿ ಆಸ್ಪತ್ರೆಯಲ್ಲಿ ಜಾಗವೇ ಇಲ್ಲದಂತಾಗಿದೆ. ಸರ್ಕಾರದಿಂದ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ, ಶವಾಗಾರ ಗಳಲ್ಲಿ ಕೋವಿಡ್-೧೯ ಸಾವುಗಳ ಪ್ರಕರಣಗಳನ್ನು ನಿಭಾಯಿಸುವುದಕ್ಕಾಗಿ ಅಲ್ಲಿನ ಸಿಬ್ಬಂದಿಗಳು ಹೆಚ್ಚಿನ ಸಮಯ ಕಾರ್ಯನಿರ್ವಹಿಸಬೇಕಾಗುತ್ತಿದೆ. ಇತ್ತ ಫೀಗಲ್-ಡಿಂಗ್ ಹೇಳಿಕೆಯನ್ನು ಅಮೇರಿಕಾದ ಮೂಲದ ಆರೋಗ್ಯ ಮೆಟ್ರಿಕ್ಸ್ ಹಾಗೂ ಮೌಲ್ಯಮಾಪನ ಸಂಸ್ಥೆ ಬೆಂಬಲಿಸಿದ್ದು, ಈ ಸಂಸ್ಥೆ ೨೦೨೩ ರಲ್ಲಿ ಚೀನಾದಲ್ಲಿ ಕೋವಿಡ್ ಸಂಬAಧಿತ ಲಕ್ಷಾಂತರ ಸಾವು ನೋವುಗಳು ಸಂಭವಿಸಲಿದೆ ಎಂದು ವಿಶ್ಲೇಷಿಸಿತ್ತು.

ವಿಧಾನಸಭೆಯಲ್ಲಿ ನಾಲ್ಕು ವಿಧೇಯಕಗಳಿಗೆ ಅನುಮೋದನೆ

ಬೆಳಗಾವಿ, ಡಿ. ೨೦: ವಿಧಾನಸಭೆಯಲ್ಲಿ ಇಂದು ನಾಲ್ಕು ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು. ೨೦೨೨ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳು ಅನುಮೋದನೆಗೊಂಡವು. ೨೦೨೨ನೇ ಸಾಲಿನ ಕರ್ನಾಟಕ ಭೂಕಂದಾಯ(ಎರಡನೇ ತಿದ್ದುಪಡಿ) ವಿಧೇಯಕ, ೨೦೨೨ನೇ ಸಾಲಿನ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ, ೨೦೨೨ನೇ ಸಾಲಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ ವಿಧೇಯಕಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್. ಅಶೋಕ, ಮುರುಗೇಶ ನಿರಾಣಿ, ವಿ. ಸುನೀಲ್ ಕುಮಾರ್ ಅವರು ಮಂಡಿಸಿದರು. ನಂತರ ಅನುಮೋದನೆ ಪಡೆದುಕೊಳ್ಳಲಾಯಿತು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ೨೦೨೧ನೇ ಸಾಲಿನ ಬಂಧಿಗಳ ಗುರುತಿಸುವಿಕೆ ವಿಧೇಯಕ ಹಿಂಪಡೆಯುವುದನ್ನು ಮಂಡಿಸಿರುವುದಕ್ಕೆ ವಿಧಾನಸಭೆ ತಾತ್ಕಾಲಿಕ ತಡೆ ನೀಡಿತು.

ತಾಜ್ ಮಹಲ್‌ಗೆ ತೆರಿಗೆ ಇಲಾಖೆಯಿಂದ ನೋಟೀಸ್!

ಆಗ್ರಾ, ಡಿ. ೨೦: ಜಗತ್ತಿನ ಅದ್ಭುತ ಕಟ್ಟಡಗಳಲ್ಲಿ ಒಂದಾಗಿರುವ ಪ್ರೇಮಸೌಧ ತಾಜ್ ಮಹಲ್‌ಗೆ ಇದೇ ಮೊದಲ ಬಾರಿಗೆ ತೆರಿಗೆ ಇಲಾಖೆ ನೋಟೀಸ್ ನೀಡಿದ್ದು, ತೆರಿಗೆ ಪಾವತಿಸದಿದ್ದರೆ ಸೀಜ್ ಮಾಡುವ ಕುರಿತು ಎಚ್ಚರಿಕೆ ನೀಡಿದೆ. ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್‌ಗೆ ಸಂಕಷ್ಟ ಎದುರಾಗಿದ್ದು, ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ತಾಜ್ ಮಹಲ್‌ಗೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. ಅದೂ ಕೂಡ ಬರೊಬ್ಬರಿ ರೂ. ೧.೫ ಲಕ್ಷ ಆಸ್ತಿ ತೆರಿಗೆ ಮತ್ತು ರೂ. ೧.೯ ಕೋಟಿ ನೀರಿನ ತೆರಿಗೆಯನ್ನು ಕೂಡಲೇ ಪಾವತಿಸುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಜನವರಿ ೧೫ ರೊಳಗೆ ಬಾಕಿ ಪಾವತಿಸದಿದ್ದರೆ ತಾಜ್ ಮಹಲ್ ಸೀಜ್ ಮಾಡುವುದಾಗಿ ಪುರಸಭೆ ಅಧಿಕಾರಿಗಳು ನೋಟೀಸ್‌ನಲ್ಲಿ ತಿಳಿಸಿದ್ದಾರೆ. ಪಾಲಿಕೆ ಅಧಿಕಾರಿಗಳು ನೀಡಿದ ಈ ನೋಟಿಸ್ ನೋಡಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದು, ಈ ಸಂಬAಧ ಉಂಟಾಗಿರುವ ಗೊಂದಲಗಳ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ರೀತಿಯ ನೋಟೀಸ್ ಬರುತ್ತಿರುವುದು ಇದೇ ಮೊದಲು ಎಂದು ಹೇಳಿರುವ ಪುರಾತತ್ವ ಇಲಾಖೆ ಅಧಿಕಾರಿಗಳು, ಈ ಕುರಿತ ಗೊಂದಲಗಳನ್ನು ಕೂಡಲೇ ಸಂಬAಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.

ಮೂವರು ಉಗ್ರರು ಹತ

ಜಮ್ಮು, ಡಿ. ೨೦: ಕಾಶ್ಮೀರಿ ಪಂಡಿತರೊಬ್ಬರ ಹತ್ಯೆ ಮಾಡಿದ ಮೂವರು ಉಗ್ರರನ್ನು ಸೇನಾಪಡೆಗಳು ಇಂದು ಬೆಳಿಗ್ಗೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮಜ್ಮಾರ್ಗ್ ಝೈನಾಪುರ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿವೆ. ಕಾಶ್ಮೀರಿ ಪಂಡಿತ ಕ್ರಿಶನ್ ಭಟ್ರನ್ನು ಉಗ್ರರು ಅಕ್ಟೋಬರ್ ೧೫ ರಂದು ಚೌದ್ರಿಗುಂಡ್ ಶೋಪಿಯಾನ್ನಲ್ಲಿ ಗುಂಡು ಹಾರಿಸಿ ಕೊಂದಿದ್ದರು. ನಂತರ ಉಗ್ರರ ಬೇಟೆಗೆ ಸೇನಾಪಡೆಗಳು ಜಾಲ ಬೀಸಿದ್ದವು. ಇಂದು ಶೋಪಿಯಾನ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ತಿಳಿದು ಸೇನಾ ಪಡೆಗಳು ಕಾರ್ಯಾಚರಣೆಗಿಳಿದಿದ್ದವು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರಿಂದ ಎಕೆ-೪೭ ರೈಫಲ್ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖರ್ಗೆ ಹೇಳಿಕೆಗೆ ಆಕ್ಷೇಪ - ಸಂಸತ್ತಿನಲ್ಲಿ ಗದ್ದಲ

ನವದೆಹಲಿ, ಡಿ. ೨೦: ಕಾಂಗ್ರೆಸ್ ದೇಶಕ್ಕಾಗಿ ಕೆಲಸ ಮಾಡಿದೆ. ಸ್ವಾತಂತ್ರ‍್ಯ ಪಡೆಯಲು ಸಹಾಯ ಮಾಡಿದೆ. ನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರು ದೇಶಕ್ಕಾಗಿ ಒಂದು "ನಾಯಿಯನ್ನು ಸಹ ಕಳೆದುಕೊಂಡಿಲ್ಲ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಸಂಸತ್ತಿನಲ್ಲಿ ಮಂಗಳವಾರ ತೀವ್ರ ಗದ್ದಲವನ್ನು ಸೃಷ್ಟಿಸಿದೆ. ರಾಜಸ್ಥಾನದ ಅಲ್ವಾರ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ನಡೆದ ರ‍್ಯಾಲಿಯಲ್ಲಿ ಖರ್ಗೆ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಯನ್ನು ಇಂದು ಸಂಸತ್ತಿನಲ್ಲಿ ಉಭಯ ಸದನಗಳಲ್ಲಿ ಪ್ರಸ್ತಾಪಿಸಿದ ಬಿಜೆಪಿ ನಾಯಕರು ಖರ್ಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.

ಮಹಾರಾಷ್ಟç ಸರ್ಕಾರ ವಿರುದ್ಧ ಖಂಡನಾ ನಿರ್ಣಯ

ಬೆಳಗಾವಿ, ಡಿ. ೨೦: ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಹಾರಾಷ್ಟç ಸರ್ಕಾರ ವಿರುದ್ಧ ಖಂಡನಾ ನಿರ್ಣಯವನ್ನು ಉಭಯ ಸದನಗಳಲ್ಲಿ ಮಂಡಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಮಹಾರಾಷ್ಟç, ಕೇರಳ ಹಾಗೂ ಕರ್ನಾಟಕ ಗಡಿ ವಿಚಾರವಾಗಿ ನಿಳುವಳಿ ಸೂಚನೆ ಸಂದರ್ಭದಲ್ಲಿ ಮಹಾರಾಷ್ಟç ಸರ್ಕಾರ ಹಾಗೂ ಅವರ ನಡೆ ವಿರುದ್ಧ ಉಭಯ ಸದನ ಮೂಲಕ ಖಂಡನಾ ನಿರ್ಣಯ ಮಂಡಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು, ಇದಕ್ಕೆ ಎಲ್ಲಾ ಸದಸ್ಯರ ಒಪ್ಪಿಗೆ ವಿಧಾನಸಭೆಯಲ್ಲಿ ದೊರಕಿದೆ.