ಗೋಣಿಕೊಪ್ಪ ವರದಿ, ಡಿ. ೨೦: ಪಟ್ಟಣದಲ್ಲಿ ಪತ್ತೆಯಾಗಿರುವ ಅಸ್ವಸ್ಥ ಅಪರಿಚಿತ ವೃದ್ಧನನ್ನು ಸ್ಥಳೀಯ ಪೊಲೀಸರು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು ವಾರಸುದಾರರು ಇದ್ದಲ್ಲಿ ಸಂಪರ್ಕಿಸಲು ಕೋರಿದೆ. ಸುಮಾರು ೭೫ ವರ್ಷ ವಯಸ್ಸಿರಬಹುದು ಎಂದು ಅಂದಾಜಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ೦೮೨೭೪೨೪೭೩೩೩ ಸಂಖ್ಯೆ ಸಂಪರ್ಕಿಸಬಹುದಾಗಿದೆ.