ಕೂಡಿಗೆ, ಡಿ. ೨೦: ಕೂಡಿಗೆಯಲ್ಲಿರುವ ಸೈನಿಕ ಶಾಲೆಯ ಮೈದಾನದಲ್ಲಿ ಸಿಬಿಎಸ್‌ಸಿ ಅಂತರ ಶಾಲೆಗಳ ಫುಟ್‌ಬಾಲ್ ಮತ್ತು ಹ್ಯಾಂಡ್‌ಬಾಲ್ ಕ್ರೀಡಾಕೂಟ ನಡೆಯಿತು. ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್ ಕಾರ್ಯಕ್ರಮ ಉದ್ಘಾಟಿಸಿದರು.

ಕೂಡಿಗೆ ಸೈನಿಕ ಶಾಲೆ, ಸುಳ್ಯದ ಕೆ.ವಿ.ಜಿ. ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ, ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲೆ, ಅರಮೇರಿಯ ಎಸ್.ಎಂ.ಎಸ್. ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಷನ್, ಮಡಿಕೇರಿಯ ಎ.ಎಲ್.ಜಿ. ಕ್ರೆಸೆಂಟ್ ಶಾಲೆ ಹಾಗೂ ಅತ್ತೂರಿನ ನ್ಯಾಷನಲ್ ಅಕಾಡೆಮಿ ಸೇರಿದಂತೆ ಒಟ್ಟು ೯ ಶಾಲೆಗಳು ಭಾಗವಹಿಸಿದ್ದವು.

೧೨ ರಿಂದ ೧೬ ವಯೋಮಾನದ ಎ.ಎಲ್.ಜಿ. ಕ್ರೆಸೆಂಟ್ ಶಾಲೆ ಹಾಗೂ ಅತ್ತೂರಿನ ನ್ಯಾಷನಲ್ ಅಕಾಡೆಮಿ ಸೇರಿದಂತೆ ಒಟ್ಟು ೯ ಶಾಲೆಗಳು ಭಾಗವಹಿಸಿದ್ದವು.

೧೨ ರಿಂದ ೧೬ ವಯೋಮಾನದ ಬಾಲಕರಿಗೆ ಫÀÅಟ್‌ಬಾಲ್ ಹಾಗೂ ಬಾಲಕಿಯರಿಗೆ ಹ್ಯಾಂಡ್‌ಬಾಲ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಫಲಿತಾಂಶ: ಫುಟ್‌ಬಾಲ್ ವಿಭಾಗದಲ್ಲಿ ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲೆ ಪ್ರಥಮ ಸ್ಥಾನವನ್ನು ಪಡೆದರೆ, ಸುಳ್ಯದ ಕೆ.ವಿ.ಜಿ. ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಬಾಲಕಿಯರ ಹ್ಯಾಂಡ್‌ಬಾಲ್ ವಿಭಾಗದಲ್ಲಿ ಅರಮೇರಿಯ ಎಸ್.ಎಂ.ಎಸ್. ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಷನ್ ಶಾಲೆ ಪ್ರಥಮ, ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.

ಫುಟ್ಬಾಲ್ ವಿಭಾಗದಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಅಂಕುರ್ ಪಬ್ಲಿಕ್ ಶಾಲೆಯ ಅಖಿಲ್ ಭಾಜನರಾದರೆ, ಹ್ಯಾಂಡ್‌ಬಾಲ್ ವಿಭಾಗದಲ್ಲಿ ಅರಮೇರಿಯ ಎಸ್.ಎಂ.ಎಸ್. ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಷನ್ ಶಾಲೆಯ ಕುಮಾರಿ ಸಂಜನ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು. ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕ್ರೀಡಾಕೂಟದ ಸಂಚಾಲಕರಾಗಿ ಗಣಿತ ಶಿಕ್ಷಕ ಸುರೇಶ್, ಬಿ.ಹೆಚ್.ಎಂ. ರನೀಶ್, ಸಿ.ಹೆಚ್.ಎಂ. ಸ್ಟಾಲಿನ್, ಶಿವ, ರ‍್ಜೆಂಟ್ ಸಿ. ರಾಯ್ ಕಾರ್ಯನಿರ್ವಹಿಸಿದರು.