ಮಡಿಕೇರಿ, ಡಿ. ೧೯: ಒಡಿಷಾದಲ್ಲಿ ತಾ. ೨೦ ರಿಂದ (ಇಂದಿನಿAದ) ಆರಂಭಗೊಳ್ಳಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ ೨೦೨೨ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ೧೮ ವರ್ಷದೊಳಗಿನ ಮಹಿಳಾ ಹಾಕಿ ತಂಡದ ನಾಯಕಿಯಾಗಿ ಕೊಡಗಿನವರಾದ ಪಾಂಡAಡ ದೇಚಮ್ಮ ಗಣಪತಿ ಆಯ್ಕೆಯಾಗಿದ್ದಾರೆ.
ತಂಡದ ವ್ಯವಸ್ಥಾಪಕಿಯಾಗಿ ಕೂಡ ಜಿಲ್ಲೆಯವರಾದ ಕೊಕ್ಕಲೆಮಾಡ ಗೌತಮಿ ಗಂಗಮ್ಮ ಪಾಲ್ಗೊಂಡಿದ್ದು, ತಂಡದ ಇತರ ಆಟಗಾರರಾಗಿ ಕೊಡಗು ಹಾಗೂ ಕೊಡಗು ಮೂಲದವರಾದ ಒಟ್ಟು ೧೩ ಮಂದಿ ೧೮ ಸದಸ್ಯರ ಪಟ್ಟಿಯಲ್ಲಿದ್ದಾರೆ. ದೇಚಮ್ಮ ಅವರೊಂದಿಗೆ ಮುಕ್ಕಾಟಿರ ಕಾವ್ಯಶ್ರೀ, ಕುಂಡಚ್ಚಿರ ತೇಜ್ ಬೆಳ್ಯಪ್ಪ, ಸೀಮಾ ಎ.ಪಿ., ನಿಸರ್ಗ, ಸಿದ್ದಂಗ, ಮಣಿ, ದಿಲನ್, ಪ್ರೇಕ್ಷಿಕ, ಕೀರ್ತನ, ಗೆದಲ ಗಾಯತ್ರಿ, ಯು. ಸೌಮ್ಯ ಹಾಗೂ ದೀಪಿಕ ಕರ್ನಾಟಕ ತಂಡದಲ್ಲಿರುವ ಕೊಡಗು ಹಾಗೂ ಕೊಡಗು ಮೂಲದ ಆಟ ಗಾರರಾಗಿದ್ದಾರೆ.