ಮಡಿಕೇರಿ, ಡಿ. ೧೯: ನೆಲಜಿಯ ಫಾಮರ‍್ಸ್ ಡೆವಲಪ್‌ಮೆಂಟ್ ಅಂಡ್ ರಿಕ್ರಿಯೇಷನ್ಸ್ ಅಸೋಸಿಯೇಷನ್ ವತಿಯಿಂದ ಜ. ೧೪ ರಂದು ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಕುಟುಂಬಗಳ ನಡುವೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಮಂಡಿರ ನಂದ ನಂಜಪ್ಪ ಹಾಗೂ ಸಲಹಾ ಸಮಿತಿಯ ಮಾಳೆಯಂಡ ಅಪ್ಪಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೮.೩೦ ಗಂಟೆಯಿAದ ಸ್ಪರ್ಧೆ ಆರಂಭಗೊಳ್ಳಲಿದ್ದು, ಒಂದು ತಂಡದಲ್ಲಿ ಇಬ್ಬರಂತೆ ಪ್ರತಿಯೊಂದು ಕುಟುಂಬದಿAದ ಒಂದಕ್ಕೂ ಅಧಿಕ ತಂಡ ಪಾಲ್ಗೊಳ್ಳಬಹುದಾಗಿದೆ. ಪ್ರತಿ ತಂಡವು ೦.೨೨ ಹಾಗೂ ೧೨ ಬೋರ್ ಬಂದೂಕು ವಿಭಾಗಗಳಲ್ಲಿ ಕಡ್ಡಾಯ ವಾಗಿ ಭಾಗವಹಿಸಬೇಕು. ಸುಮಾರು ೮೦೦ ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸ್ಪರ್ಧಿಗಳು ಕೊಡವ ಉಡುಪಿನಲ್ಲಿ ಪಾಲ್ಗೊಳ್ಳಬೇಕು. ಮೊದಲ ಬಹುಮಾನವಾಗಿ ೫೦ ಸಾವಿರ ನಗದು ಟ್ರೋಫಿ, ದ್ವಿತೀಯ ಬಹುಮಾನವಾಗಿ ೩೦ ಸಾವಿರ ನಗದು, ಟ್ರೋಫಿ ಹಾಗೂ ತೃತೀಯ ಬಹುಮಾನವಾಗಿ ೨೦ ಸಾವಿರ ನಗದು ಹಾಗೂ ಟ್ರೋಫಿಯನ್ನು ನೀಡಲಾಗು ವುದು. ಹೆಚ್ಚಿನ ಮಾಹಿತಿಗೆ ೯೮೮೦೫೩೨೮೫೦, ೯೩೮೦೩೦೩೩೮೭ ದೂರವಾಣಿಯನ್ನು ಸಂಪರ್ಕಿಸ ಬಹುದೆಂದು ನಂದ ನಂಜಪ್ಪ, ಅಪ್ಪಣ್ಣ ಮಾಹಿತಿಯಿತ್ತರು.(ಮೊದಲ ಪುಟದಿಂದ)
ಅಸೋಸಿಯೇಷನ್ ವತಿಯಿಂದ ೩ನೇ ವರ್ಷದ ರಾಜ್ಯಮಟ್ಟದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಜ. ೧೫ ರಂದು ನಾಪೋಕ್ಲು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ೦.೨೨ ಹಾಗೂ ೧೨ ಬೋರ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಇದರಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ೫೦ ಸಾವಿರ, ೩೦ ಸಾವಿರ ಹಾಗೂ ೨೦ ಸಾವಿರ ನಗದು ಹಾಗೂ ಟ್ರೋಫಿಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಕೈಬುಲಿರ ಉಮೇಶ್, ಕಾರ್ಯದರ್ಶಿ ಮಾಳೆಯಂಡ ಪ್ರದೀಪ್ ಉತ್ತಪ್ಪ, ಖಜಾಂಜಿ ಚಿಯಕಪೂವಂಡ ನವೀನ್ ನಾಚಪ್ಪ ನಿರ್ದೇಶಕ ಮಾಳೆಯಂಡ ಸಿ. ವಿಜಯ ಉಪಸ್ಥಿತರಿದ್ದರು.