ನಾಪೋಕ್ಲು, ಡಿ. ೧೮: ಒರಿಸ್ಸಾದ ಭುವನೇಶ್ವರ್‌ನಲ್ಲಿ ತಾ. ೧೯ ರಿಂದ ೩೦ ರ ವರೆಗೆ ಜರುಗಲಿರುವ ಖೇಲೋ ಇಂಡಿಯಾದ ಸಬ್ ಜ್ಯೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಹಾಕಿ ಕೂರ್ಗ್ನ ತೀರ್ಪುಗಾರರಾದ ಬಲ್ಲಮಾವಟಿಯ ಅಪ್ಪಚೆಟ್ಟೋಳಂಡ ಹರ್ಷಿತ್ ಅಯ್ಯಪ್ಪ ಆಯ್ಕೆ ಆಗಿದ್ದಾರೆ. ಇವರು ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಅಪ್ಪಚೆಟ್ಟೋಳಂಡ ಬೋಪಯ್ಯ, ಬೋಜಮ್ಮ ದಂಪತಿಗಳ ಪುತ್ರ. ಪ್ರಸ್ತುತ ಮೂರ್ನಾಡು ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.