ಮಡಿಕೇರಿ, ಡಿ. ೧೮: ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಯಾಗಿ ಭಾಗವಹಿಸುವವರಿಗೆ ಆ್ಯಪ್ ಮೂಲಕ ತಾ. ೧೮ ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಇದನ್ನು ತಾ. ೨೫ರ ತನಕ ವಿಸ್ತರಿಸಲಾಗಿದೆ. ಆಸಕ್ತರು ನೋಂದಣಿ ಮಾಡಿಕೊಂಡು ಸಮ್ಮೇಳನದಲ್ಲಿ ಭಾಗವಹಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮನವಿ ಮಾಡಿದ್ದಾರೆ. ಮಾಹಿತಿಗೆ ೯೪೪೮೩೪೬೨೭೬ ಅನ್ನು ಸಂಪರ್ಕಿಸಬಹುದು.