ಮಡಿಕೇರಿ, ಡಿ. ೧೮: ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ೨ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದೆ. ಬೇತು ಗ್ರಾಮದ ಆರೀಸ್ ಎಂ.ಎ. ಬಂಧಿತನಾಗಿದ್ದು, ಕೊಟ್ಟಮುಡಿ-ಹೊದವಾಡ ಗ್ರಾಮದ ಕೆ.ಯ. ಅಬ್ಬಾಸ್, ನಾಪೋಕ್ಲು ಹಳೇ ತಾಲೂಕಿನ ರಿಜ್ವಾನ್ ತಲೆಮರೆಸಿಕೊಂಡಿದ್ದಾರೆ.

ವೀರಾಜಪೇಟೆ ಅರಣ್ಯ ವಲಯದ ಹೆಗ್ಗಳ ವ್ಯಾಪ್ತಿಯ ಕೊಟ್ಟೋಳಿ-ವೀರಾಜಪೇಟೆ ಮಾರ್ಗದ ರಸ್ತೆಯಲ್ಲಿ ಮಹೇಂದ್ರ ಪಿಕಪ್ ವಾಹನದ ಮೇಲ್ಭಾಗದಲ್ಲಿ ಸಿಹಿಗೆಣಸನ್ನು ತುಂಬಿ ಕೆಳ ಭಾಗದಲ್ಲಿ ೧೧ ಬೀಟೆ ಮರದ ನಾಟಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭ ದಾಳಿ ನಡೆಸಿದ ಇಲಾಖೆಯ ಸಿಬ್ಬಂದಿಗಳು ರೂ. ೫ ಲಕ್ಷ ಮೌಲ್ಯದ ನಾಟಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಸಹಿತ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಎನ್.ಎನ್. ಮೂರ್ತಿ, ವೀರಾಜಪೇಟೆ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಮ್‌ಬಾಬು, ಚಕ್ರಪಾಣಿ, ಸಹಾಯಕ ಸಂರಕ್ಷಣಾಧಿಕಾರಿ ಕೊಚ್ಚೆರ ನೆಹರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳೀರ ಎಂ. ದೇವಯ್ಯ, ಅರಣ್ಯಾಧಿಕಾರಿಗಳಾದ ದೇಯಂಡ ಸಂಜಿತ್ ಸೋಮಯ್ಯ, ಕೆ.ಆರ್. ಆನಂದ್, ಎಂ.ಎಸ್. ಮೋನಿಷ, ಅರಣ್ಯ ರಕ್ಷಕರುಗಳಾದ ಚಂದ್ರಶೇಖರ್ ಅಮರಗೋಳ, ಸಿ. ಅರುಣ್, ಮಾಲತೇಶ್ ಬಡಿಗೇರ್, ವಾಹನ ಚಾಲಕರುಗಳಾದ ಅಶೋಕ್ ಹಾಗೂ ಆರ್.ಆರ್.ಟಿ. ಸಿಬ್ಬಂದಿಗಳಾದ ನಾಚಪ್ಪ, ಪವಿತ್ರಕುಮಾರ್, ಲಾರೆನ್ಸ್, ವಿಕಾಸ್, ಮಹೇಶ್, ಲತೇಶ್ ಇದ್ದರು.