ಮಡಿಕೇರಿ, ಡಿ. ೧೮: ಅಗ್ನಿಪಥ್ ಯೋಜನೆ ಅಡಿಯಲ್ಲಿ ಭಾರತೀಯ ಸೇನೆಗೆ ಆಯ್ಕೆಯಾದ ಜಿಲ್ಲೆಯ ಐವರನ್ನು ನಗರದ ಮಾರ್ನಿಂಗ್ ಸ್ಟಾರ್ ತಂಡದ ವತಿಯಿಂದ ಸನ್ಮಾನಿಸಲಾಯಿತು.

ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪ್ರತಿದಿನ ಬೆಳಿಗ್ಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರರಾಗಿ ಆಯ್ಕೆಯಾಗಲು ಹಲವು ಅಭ್ಯರ್ಥಿಗಳು ಒಂದು ತಂಡವನ್ನು ರಚಿಸಿ ಅಭ್ಯಾಸ ನಡೆಸುತ್ತಿದ್ದರು. ಅಂತಿಮ ಪರೀಕ್ಷೆಯಲ್ಲಿ ಸೂರ್ಲಬ್ಬಿಯ ಮುತ್ತಣ್ಣ, ಕೊಡ್ಲಿಪೇಟೆ ಮನು, ತಾಳತ್‌ಮನೆ ಇಂದ್ರಜಿತ್, ಸೋಮವಾರಪೇಟೆ ಹಾನಗಲ್‌ನ ವಿಶ್ವಾಸ್, ಸೂರ್ಲಬ್ಬಿಯ ಸುಬ್ಬಯ್ಯ ಆಯ್ಕೆಯಾದ ಹಿನ್ನೆಲೆ ಸನ್ಮಾನಿಸಲಾಯಿತು. ಈ ಸಂದರ್ಭ ಮಾರ್ನಿಂಗ್ ಸ್ಟಾರ್ ತಂಡದ ರವೀಂದ್ರ ರೈ ಸೇರಿದಂತೆ ಇನ್ನಿತರರು ಹಾಜರಿದ್ದರು.