ಕರಿಕೆ, ಡಿ. ೧೮: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಅದಾಲತನ್ನು ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ ಕೆ.ಜೆ. ಅವರ ಅಧ್ಯಕ್ಷೆತೆಯಲ್ಲಿ ನಡೆಸಲಾಯಿತು. ಚೆಸ್ಕಾಂ ಅಧಿಕಾರಿ ಗಳಾದ ಎ.ಆರ್. ಸಂಪತ್, ಇಂಜಿನಿ ಯರ್, ತೇಜ ಎಂ.ಎA. ಜೂ. ಇಂಜಿನಿಯರ್, ಸಂತೋಷ್ಕುಮಾರ್ ಎನ್.ಎಸ್. ಸ. ಲೆಕ್ಕಾಧಿಕಾರಿ ಹಾಜರಿದ್ದು ಇಲಾಖೆಯ ಕುಂದು ಕೊರತೆಗಳನ್ನು ಚರ್ಚಿಸಲಾಯಿತು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಬಾಲಚಂದ್ರ ನಾಯರ್, ಸದ್ಯರು ಹಾಗೂ ಚೆಸ್ಕಾಂ ಸಿಬ್ಬಂದಿಗಳು, ಪಂ.ಅ. ಅಧಿಕಾರಿಗಳು ಉಪಸ್ಥಿತ ರಿದ್ದರು. ಸಾರ್ವಜನಿಕರು ಕುಂದು ಕೊರತೆಗಳನ್ನು ಸಭೆಯಲ್ಲಿ ತಿಳಿಸಿದರು.