ಗುಡ್ಡೆಹೊಸೂರು, ಡಿ. ೧೭: ಗುಡ್ಡೆಹೊಸೂರು ಗ್ರಾ.ಪಂ. ಕೆಡಿಪಿ ಸಭೆ ಪಂಚಾಯಿತಿ ಅಧ್ಯಕ್ಷೆ ನಂದಿನಿ ಅಧ್ಯಕ್ಷತೆಯಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ನಡೆಯಿತು.
ಸಭೆಯ ಆರಂಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಪ್ರತಿನಿಧಿಗಳು ಇಲಾಖೆಗೆ ಸಂಬAಧಿಸಿದ ಮಾಹಿತಿಯನ್ನು ಸಭೆಗೆ ನೀಡಿದರು.
ಚಿಕ್ಲಿಹೊಳೆ ನಾಲೆ ಅವ್ಯವಸ್ಥೆ ಬಗ್ಗೆ ಸದಸ್ಯರುಗಳು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ನೀರಾವರಿ ನಿಗಮದ ಮೂಲಕ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಇಲಾಖೆ ಅಭಿಯಂತರರಲ್ಲಿ ಮಾಹಿತಿ ಬಯಸಿದರು.
ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿವೆ. ಮತ್ತೆ ಕೆಲವು ಕಡೆ ರಸ್ತೆ ಬದಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ, ಬಳಕೆಯಲ್ಲಿಲ್ಲದ ಕಂಬಗಳನ್ನು ತೆರವು ಗೊಳಿಸಲು ಸದಸ್ಯರುಗಳು ಚೆಸ್ಕಾಂ ಅಭಿಯಂತರರನ್ನು ಒತ್ತಾಯಿಸಿದರು. ಜಂಗಲ್ ಕಟ್ಟಿಂಗ್ ಬಳಿಕ ಮರಗಿಡಗಳ ರಂಬೆಕೊAಬೆಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಚೆಸ್ಕಾಂ ಸಿಬ್ಬಂದಿಗಳಿಗೆ ಸೂಚನೆ ನೀಡಲು ಕೋರಲಾಯಿತು.
ಮಾದಾಪಟ್ಟಣದಲ್ಲಿ ಸ್ಮಶಾನ ಅಭಿವೃದ್ಧಿ ಕಾರ್ಯ ಕೂಡಲೇ ಕೈಗೆತ್ತಿಕೊಳ್ಳಬೇಕು. ವ್ಯಕ್ತಿಯೊಬ್ಬರು ಕಾಟಿಕೆರೆ ಒತ್ತುವರಿ ಮಾಡಿಕೊಂಡಿದ್ದು ತೆರವುಗೊಳಿಸಲು ಪಂಚಾಯಿತಿ ಯೊಂದಿಗೆ ಸಹಕರಿಸುವಂತೆ ಕಂದಾಯಾಧಿಕಾರಿ ಸಂತೋಷ್ ಅವರಲ್ಲಿ ಅಧ್ಯಕ್ಷೆ ನಂದಿನಿ, ಪಿಡಿಓ ಶ್ಯಾಂ ತಮ್ಮಯ್ಯ ಮತ್ತು ಸದಸ್ಯರು ಆಗ್ರಹಿಸಿದರು.
ಪಿಡಿಓ ಶ್ಯಾಂ ತಮ್ಮಯ್ಯ ಸಭೆಗೆ ಅಗತ್ಯ ಮಾಹಿತಿ, ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಯಶೋಧ ಸೇರಿದಂತೆ ಸದಸ್ಯರುಗಳು ಇದ್ದರು.
ಕಂದಾಯ, ಆರೋಗ್ಯ, ಚೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ, ಕಾವೇರಿ ನೀರಾವರಿ ನಿಗಮ, ಜಿಲ್ಲಾ ಪಂಚಾಯಿತಿ, ಶಿಕ್ಷಣ, ಅಬಕಾರಿ, ಅರಣ್ಯ ಇಲಾಖೆ ಅಧಿಕಾರಿ, ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.