ಕಡAಗ, ಡಿ. ೧೭: ಬಲ್ಲಚಂಡ ಟಿಟ್ಟು ಅವರ ಜ್ಞಾಪಕಾರ್ಥವಾಗಿ ಎರಡನೇ ವರ್ಷದ ಅರಫ ಮತ್ತು ಲಿಂಬ್ರ ಫ್ರೆಂಡ್ಸ್ ವತಿಯಿಂದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟವು ಕಡಂಗ ವಿಜಯಶಾಲಾ ಮೈದಾನದಲ್ಲಿ ಏರ್ಪಡಿಸಲಾಯಿತು.

ಪಂದ್ಯಾಟಕ್ಕೂ ಮೊದಲು ಅರಫ ಮತ್ತು ಲಿಂಬ್ರ ಫ್ರೆಂಡ್ಸ್ ಕ್ರೀಡಾ ಸಂಚಾಲಕ ಅಬ್ದುಲ್ ಕರಿ ಮತ್ತು ಅಬ್ದುಲ್ ರಹಮಾನ್ ಅರಫ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಸಲಾಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಬಲ್ಲಚಂಡ ಟಿಟ್ಟು ಅವರ ಪತ್ನಿ ಎಸ್‌ಎಂಎಸ್ ಶಾಲಾ ಪ್ರಾಂಶುಪಾಲೆ ಕುಸುಮಾ ನೆರವೇರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾದ ವಿಜಯ ವಿದ್ಯಾಸಂಸ್ಥೆಯ ಅಧ್ಯಕ್ಷ ಉದಯ ಅವರು ಮಾತನಾಡಿ ಟಿಟ್ಟು ಅವರ ಜೀವನ ಶೈಲಿ ಮತ್ತು ಕ್ರೀಡೆಯ ಬಗ್ಗೆ ಸವಿಸ್ತಾರವಾಗಿ ನುಡಿದರು. ಮತ್ತೊಬ್ಬ ಮುಖ್ಯ ಅತಿಥಿ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇವಡ ಗಿರೀಶ್ ಮಾತನಾಡಿ ಇಂತಹ ಕ್ರೀಡೆಗಳಿಂದ ಜಿಲ್ಲೆಯ ಪ್ರತಿಭೆಗಳನ್ನು ಬೆಳೆಸುವುದು ಮತ್ತು ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನುಡಿದರು.

ಮತ್ತೊಬ್ಬ ಮುಖ್ಯ ಪಂಚಾಯಿತಿ ಸದಸ್ಯ ಅತಿಥಿ ಸುಬ್ಬೀರ್ ಸಿಇ ಮಾತನಾಡಿ, ಅಕಾಲಿಕವಾಗಿ ಮರಣ ಹೊಂದಿದ ಟಿಟ್ಟು ಅವರ ಜೀವನಶೈಲಿಯ ಬಗ್ಗೆ ಮಾತನಾಡಿದರು. ಸಮಾರಂಭದಲ್ಲಿ ನಿವೃತ್ತ ಯೋಧ ಸಲಾಂ ಮತ್ತು ಹವಾಲ್ದಾರ್ ಸುಬ್ಬಯ್ಯ ಅವರನ್ನು ಕ್ರೀಡಾ ಸಂಘದ ವತಿಯಿಂದ ಎಲ್ಲರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ರಾತ್ರಿ ೮ ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಹೈಕೋರ್ಟ್ ವಕೀಲ ಎ.ಎಸ್. ಪೊನ್ನಣ್ಣ ರವರು ಮಾತನಾಡಿ, ಕ್ರೀಡಾಕೂಟಗಳಿಂದ ಯುವ ಪ್ರತಿಭೆಗಳನ್ನು ಹೊರ ತರಲು ಸಹಾಯವಾಗುತ್ತದೆ ಮತ್ತು ದೇಶ ವಿದೇಶಗಳಲ್ಲಿ ಪ್ರತಿನಿಧಿಸಲು ಗ್ರಾಮೀಣ ಮಟ್ಟದಿಂದಲೇ ಕ್ರೀಡೆಗೆ ಒತ್ತು ನೀಡಬೇಕು ಎಂದು ನುಡಿದರು.

ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಯುವ ಪೀಳಿಗೆ ದುಶ್ಚಟಗಳಿಂದ ದೂರವಾಗಿ ಕ್ರೀಡಾಕೂಟಗಳಲ್ಲಿ ಮತ್ತು ಇನ್ನಿತರ ಸಾಮಾಜಿಕ ಚಟುವಟಿಕೆಗಳಲ್ಲಿ ಮುಂದೆ ಬಂದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬೇಕು ಎಂದು ನುಡಿದರು. ವಿಜೇತ ತಂಡವಾಗಿ ಉಂಡಪ್ಪರ ವಾರಿಯರ್ಸ್ ರನ್ನರ್ ತಂಡವಾಗಿ ಎಸ್‌ಎಂಎಸ್ ಫ್ರೆಂಡ್ಸ್ ಹೊರಹೊಮ್ಮಿದರು. ಉತ್ತಮ ಆಟಗಾರ ಪ್ರಶಸ್ತಿ ಸೀನಾನ್, ಉತ್ತಮ ಪಾಸರ್ ಆದಿಲ್ ನಾಪೋಕ್ಲು, ವೈಯಕ್ತಿಕ ಪಾರಿತೋಷಕವನ್ನು ಹೊರ ಹೊಮ್ಮಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಲ್ಲಚಂಡ ರವಿ, ಬಲ್ಲಚಂಡ ಪೂವಿ ಸೋಮಣ್ಣ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಹಮ್ಮದ್ ರಫಿ, ಬಾನಂಡ ಪ್ರಥ್ಯು, ಕೋಡಿರ ವಿನೋದ್ ನಾಣಯ್ಯ, ರಂಜಿ, ಬಲ್ಲಚಂಡ ಬೋಪಣ್ಣ, ಪ್ರಮೋದ್ ಗಣಪತಿ, ನಾಸರ್ ವೀರಾಜಪೇಟೆ, ಶಾಫಿ ಎಡಪಾಲ, ಮುಸ್ತಾಫಾ, ಬಷೀರ್, ಹಾಜರಿದ್ದರು. ಕ್ರೀಡಾ ವಿಶ್ಲೇಷಣೆ ಹನೀಫ್ ಎಡಪಾಲ, ಶಿವದಾಸ್, ಸ್ಕೋರರ್ ಆರಿ ರಾಜಿಕ್ ಕಾರ್ಯನಿರ್ವಸಿದರು. ಸಭೆಯ ಸ್ವಾಗತ ಮತ್ತು ವಂದನಾರ್ಪಣೆಯನ್ನು ಪತ್ರಕರ್ತ ನೌಫಲ್ ಕಡಂಗ ನೆರವೇರಿಸಿದರು.