ಮಡಿಕೇರಿ, ಡಿ. ೧೭: ಪರಿಸರ ಸಮತೋಲನವಾಗಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾಗ ಪರಿವರ್ತನೆ (ಕನ್ವರ್ಷನ್) ಹೆಚ್ಚಳವಾಗುತ್ತಿರುವುದು ಭವಿಷ್ಯಕ್ಕೆ ಮಾರಕವಾಗಿದೆ. ಈ ಬಗ್ಗೆ ಮುಂದಿನ ಅಧಿವೇಶನ ಸಂದರ್ಭ ಮೇಲ್ಮನೆಯಲ್ಲಿ ಪ್ರಸ್ತಾಪಿಸುವುದಾಗಿ ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರು ಹೇಳಿದರು.
ಮಡಿಕೇರಿ ಕೊಡವ ಸಮಾಜದ ವತಿಯಿಂದ ಇಂದು ನಗರದಲ್ಲಿ ಜರುಗಿದ ಪುತ್ತರಿ ಊರೊರ್ಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ೫೦-೧೦೦ ಎಕರೆಗಳ ಪ್ರದೇಶ ಜಾಗ ಪರಿವರ್ತನೆ ಮಾಡುತ್ತಿರುವುದು ಕಳವಳಕಾರಿಯಾಗಿದೆ. ಸ್ಥಳೀಯವಾಗಿ ಸಣ್ಣ ಪ್ರಮಾಣದ ಉದ್ಯಮ-ಇನ್ನಿತರ ವಾಣಿಜ್ಯ ಚಟುವಟಿಕೆಗಳಿಗೆ ಕೇವಲ ಒಂದು ಎಕರೆಯಷ್ಟು ಜಾಗ ಪರಿವರ್ತನೆಯ ಅವಕಾಶ ಮಾತ್ರ ಇದ್ದರೆ ಒಳಿತು. ಇಲ್ಲದಿದ್ದಲ್ಲಿ ಭವಿಷ್ಯದ ವರ್ಷಗಳಲ್ಲಿ ಜಿಲ್ಲೆಯ ಪ್ರಾಕೃತಿಕತೆಗೇ ಧಕ್ಕೆಯಾಗುವ ಆತಂಕವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭತ್ತದ ಕೃಷಿಯ ಮೂಲಕ ಜಿಲ್ಲೆಯ ಪರಿಸರ ಸಮತೋಲನವಾಗುತ್ತದೆ. ಈ ನಿಟ್ಟಿನಲ್ಲಿ ಕೇರಳ ಮಾದರಿಯಲ್ಲಿ ಭತ್ತದ ಕೃಷಿಗೆ ಬೆಂಬಲ ಬೆಲೆ ಸರಕಾರದಿಂದ ಸಿಗುವಂತಾಗಲೂ ಪ್ರಯತ್ನಿಸಬೇಕಾಗಿದೆ ಎಂದ ಅವರು, ಸ್ಥಳೀಯ ಜಾಗ ಮಾರಾಟ ಮಾಡದಂತೆ ಕರೆ ನೀಡಿದರು.
ಬಾಳುಗೋಡುವಿನಲ್ಲಿರುವ ಕೊಡವ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮುಚ್ಚಯದ ಜಾಗವನ್ನು ಸದ್ಬಳಕೆ ಮಾಡಿಕೊಂಡು ಇತರ ಜನಾಂಗಗಳಿಗೆ ಮಠ-ಮಾನ್ಯಗಳಿರುವಂತೆ ಉತ್ತಮ ಕೇಂದ್ರವಾಗಿ
(ಮೊದಲ ಪುಟದಿಂದ) ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಈ ಮೂಲಕ ಕ್ರೀಡೆ, ಮೆಡಿಕಲ್ ಕಾಲೇಜು, ಇಂಜಿನಿಯರಿAಗ್ ಕಾಲೇಜಿನಂತಹ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಬೇಕಾಗಿದೆ. ಅಲ್ಲದೆ ರಾಮನಗರ, ಹಾವೇರಿ ಜಿಲ್ಲೆಗಳಲ್ಲಿರುವಂತೆ ಸಾಂಸ್ಕೃತಿಕ ಲೋಕದ ಮಾದರಿಯಲ್ಲಿ ಇದನ್ನು ಪರಿವರ್ತನೆಗೊಳಿಸಿದಲ್ಲಿ ಆದಾಯವೂ ನಿರಂತರವಾಗುತ್ತದೆ. ಈ ಚಿಂತನೆಯಿAದಲೇ ಸರಕಾರ ಬಜೆಟ್‌ನಲ್ಲಿ ಘೋಷಿಸಿದ್ದ ರೂ. ೧೦ ಕೋಟಿ ಅನುದಾನದ ಪೈಕಿ ರೂ. ೬ ಕೋಟಿಯನ್ನು ಬಾಳುಗೋಡು ಕೇಂದ್ರಕ್ಕೆ ನಿಗದಿಮಾಡಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಎಲ್ಲೆಡೆ ಇರುವ ಕೊಡವ ಸಮಾಜಗಳು ಅಭಿವೃದ್ಧಿಯ ಚಿಂತನೆ ಮೂಲಕ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಸುಜಾ ಕುಶಾಲಪ್ಪ ಕರೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರು, ಕೊಡವ ಸಮಾಜಗಳು ಉತ್ತಮ ಕೆಲಸ ಕಾರ್ಯವನ್ನು ಮಾಡುತ್ತಿದ್ದು, ಮಡಿಕೇರಿ ಕೊಡವ ಸಮಾಜದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ. ಎಲ್ಲರು ಇದಕ್ಕೆ ಕೈಜೋಡಿಸಬೇಕೆಂದರು. ಸರಕಾರದಿಂದ ಕೊಡವ ಸಮಾಜದ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆಗೊಳಿಸಿಕೊಡಬೇಕೆಂದು ಮನವಿ ಮಾಡಿದರು.
ಮಡಿಕೇರಿ ಕೊಡವ ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸುಜಾ ಕುಶಾಲಪ್ಪ ಭರವಸೆ ನೀಡಿದರು.
ಜನಾಂಗ ಉಳಿಯಬೇಕಾದರೆ ಸಂಸ್ಕೃತಿ, ಆಚಾರ-ವಿಚಾರ ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆಗೆ ಕೊಡವ ಸಂಸ್ಕೃತಿಯನ್ನು ಕಲಿಸಿದಾಗ ದೇಶ ವಿದೇಶದಲ್ಲಿದ್ದರೂ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವಂತಾಗುವುದೆAದು ಮತ್ತೋರ್ವ ಅತಿಥಿಯಾಗಿದ್ದ ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ತಿಳಿಸಿದರು. ಅತ್ಯುತ್ತಮ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಬಾಳುಗೋಡುವಿನಲ್ಲಿ ನಡೆದ ಕೊಡವ ನಮ್ಮೆಯಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ಮಡಿಕೇರಿ ಕೊಡವ ಸಮಾಜದ ಪರವಾಗಿ ವಿಜೇತರಿಗೆ ಸ್ಮರಣಿಕೆ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಅತಿಥಿಗಳನ್ನು ದುಡಿಕೊಟ್ಟ್ ಪಾಟ್ ಮೂಲಕ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯರ ಸಮ್ಮುಖದಲ್ಲಿ ಸಮಾಜದ ನೆಲ್ಲಕ್ಕಿ ನಡುಬಾಡೆಗೆ ಕರೆತಂದು ವೇದಿಕೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿ, ಸಮಾಜದ ಉಪಾಧ್ಯಕ್ಷ ನಂದಿನೆರವAಡ ಚೀಯಣ್ಣ ಸ್ವಾಗತಿಸಿ, ಸಮಾಜದ ಕಾರ್ಯದರ್ಶಿ ಕನ್ನಂಡ ಸಂಪತ್ ವಂದಿಸಿ, ಕೇಕಡ ವಿಜು ದೇವಯ್ಯ ನಿರೂಪಿಸಿದರು. ಹಬ್ಬದ ಆಚರಣೆಯ ಅಂಗವಾಗಿ ತಂಬುಟ್ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ನಂದಿನೆರವAಡ ಚೀಯಣ್ಣ, ಜಂಟಿಕಾರ್ಯದರ್ಶಿ ನಂದಿನೆರವAಡ ದಿನೇಶ್, ನಿರ್ದೇಶಕರಾದ ಕನ್ನಂಡ ಕವಿತಾ ಬೊಳ್ಳಪ್ಪ, ನಂದಿನೆರವAಡ ರವಿಬಸಪ್ಪ, ಮಂಡಿರ ಸದಾ ಮುದ್ದಪ್ಪ, ಕಾಳಚಂಡ ಅಪ್ಪಣ್ಣ, ಕಾಂಡೆರ ಲಲ್ಲು ಕುಟ್ಟಪ್ಪ, ಶಾಂತೆಯAಡ ವಿಶಾಲ್ ಕಾರ್ಯಪ್ಪ, ಚೊಟ್ಟೆಯಂಡ ಸಂಜು, ಮೂವೆರ ಜಯರಾಂ, ಪುತ್ತರಿರ ಕರುಣ್ ಕಾಳಯ್ಯ ಹಾಜರಿದ್ದರು. ಅಪರಾಹ್ನ ಕೊಡವ ಸಮಾಜದಿಂದ ಮೆರವಣಿಗೆಯೊಂದಿಗೆ ನಗರದ ಮಂದ್‌ಗೆ ತೆರಳಿ ಅಲ್ಲಿ ಪುತ್ತರಿ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್‌ನಂತಹ ಜಾನಪದ ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿದ್ದಿತು.