ವೀರಾಜಪೇಟೆ, ಡಿ. ೧೩: ವೀರಾಜಪೇಟೆ ಮೂಲದ ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅಮೂಲ್ಯ ಸುಜಿತ್ ಅಭಿನಯಿಸಿರುವ ಸುಜಯ್ ಎಸ್. ಅವರು ನಿರ್ದೇಶಿಸಿರುವ ಕ್ರಿಯೇಟಿವ್ ಮೇಕರ್ಸ್ ನಿರ್ಮಾಣದ ಸಾಮಾಜಿಕ ಸಂದೇಶ ಸಾರುವ “ಗೆಜ್ಜೆ” ಕಿರುಚಿತ್ರದ ಪೋಸ್ಟರನ್ನು ಬೆಂಗಳೂರಿನ ಸದಾಶಿವ ನಗರದ ಪಿ.ಆರ್.ಕೆ. ಕಚೇರಿಯಲ್ಲಿ ಅಶ್ವಿನಿ ಪುನಿತ್ ರಾಜ್‌ಕುಮಾರ್ ಅವರು ಬಿಡುಗಡೆಗೊಳಿಸಿದರು. ಚಿತ್ರದ ಚಿತ್ರೀಕರಣವು ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ತೆರೆಯ ಮೇಲೆ ಪ್ರದರ್ಶನಗೊಳ್ಳಲಿದೆ. ಈ ಸಂದರ್ಭ ಅಭಿನೇತ್ರಿ ಅಮೂಲ್ಯ ಸುಜಿತ್, ನಿರ್ದೇಶಕ ಸುಜಯ್, ಲಹರಿ ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.