ಸುಂಟಿಕೊಪ್ಪ, ಡಿ. ೧೩: ಕೊಡಗು ಜಿಲ್ಲಾ ಸಹ ಶಿಕ್ಷಕರ ಸಂಘದ ವತಿಯಿಂದ ಜಿಲ್ಲೆಗೆ ನೂತನವಾಗಿ ಆಗಮಿಸಿ ಅಧಿಕಾರ ವಹಿಸಿಕೊಂಡಿರುವ ಡಿ.ಡಿ.ಪಿ.ಐ. ರಂಗದಾಮಯ್ಯ ಅವರನ್ನು ಸ್ವಾಗತಿಸಲಾಯಿತು.

ಕೊಡಗು ಜಿಲ್ಲೆಗೆ ಡಿ.ಡಿ.ಪಿ.ಐ. ಆಗಿ ಅಧಿಕಾರ ಸ್ವೀಕರಿಸಿದ ರಂಗದಾಮಯ್ಯ ಅವರನ್ನು ಕೊಡಗು ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಹಾಗೂ ಪದಾಧಿಕಾರಿಗಳು ಸ್ವಾಗತಿಸಿದರು.

ಈ ಸಂದರ್ಭ ಕಾರ್ಯದರ್ಶಿ ಕುಮಾರ್ ಹೆಚ್.ಜಿ., ಖಜಾಂಚಿ ಎ.ಸಿ. ಮಂಜುನಾಥ್, ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್ ಸಂಘದ ಮತ್ತಿತರ ಪದಾಧಿಕಾರಿಗಳು ಇದ್ದರು.