ಮಡಿಕೇರಿ, ಡಿ.೧೩ : ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ೧೩ನೇ ವರ್ಷದ ತೋಕ್‌ನಮ್ಮೆ ದಕ್ಷಿಣ ಕೊಡಗಿನ ಕುರ್ಚಿ ನಾಡಿನ ಬೀರುಗ ಗ್ರಾಮದ ಅಜ್ಜಮಾಡ ಕುಟುಂಬ ಐನ್‌ಮನೆಯಲ್ಲಿ ತಾ.೧೭ ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವ ಅಲ್ಪಸಂಖ್ಯಾತ ಜನಾಂಗಗಳ ಹಕ್ಕುಗಳ ದಿನಾಚರಣೆಯ ಸಂದರ್ಭ ಸಾರ್ವತ್ರಿಕವಾಗಿ ಸಿಎನ್‌ಸಿ ತೋಕ್ ನಮ್ಮೆಯನ್ನು ಆಚರಿಸುತ್ತಾ ಬಂದಿದೆ ಮತ್ತು ಆ ಮೂಲಕ ಕೊಡವರ ಕೋವಿ ಹಕ್ಕಿನ ಕುರಿತು ಜಾಗೃತಿ ಮೂಡಿಸಿದೆ.

ವಿವಿಧೆಡೆಯಿಂದ ಆಗಮಿಸುವ ಕೊಡವರು ತಮ್ಮೊಂದಿಗೆ ತರುವ ತೋಕ್‌ಗಳಿಗೆ ಸಾಮೂಹಿಕವಾಗಿ ಭಕ್ತಿಭಾವದಿಂದ ಸಾರ್ವತ್ರಿಕ ಪೂಜೆ ನಡೆಸಿ ಪ್ರದರ್ಶಿಸಲಾಗುವುದು. ನಂತರ ಗುಂಡು ಹೊಡೆಯುವ ಪೈಪೋಟಿ ನಡೆಯಲಿದ್ದು, ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದರು.

ತೋಕ್ ಹಿಡಿದುಕೊಂಡು ಮಹಿಳೆಯರು ಹಾಗೂ ಪುರುಷರು ಕೊಡವ ಸಾಂಸ್ಕೃತಿಕ ನೃತ್ಯ ಮಾಡಲಿದ್ದಾರೆ. ಬೀರುಗ ದಕ್ಷಿಣ ಗಂಗೆ ಕೊಡವ ಸಾಂಸ್ಕೃತಿಕ ಕೂಟದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ೨೦೧೯ ರಿಂದ ವಿವಿಧ ಸಾಧಕರಿಗೆ ‘ಕೊಡವ ವಿಭೂಷಣ ಪ್ರಶಸ್ತಿ’ ನೀಡುತ್ತಾ ಬರಲಾಗಿದ್ದು, ಈ ಬಾರಿಯೂ ೬ ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮಡಿಕೇರಿ, ಡಿ.೧೩ : ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ೧೩ನೇ ವರ್ಷದ ತೋಕ್‌ನಮ್ಮೆ ದಕ್ಷಿಣ ಕೊಡಗಿನ ಕುರ್ಚಿ ನಾಡಿನ ಬೀರುಗ ಗ್ರಾಮದ ಅಜ್ಜಮಾಡ ಕುಟುಂಬ ಐನ್‌ಮನೆಯಲ್ಲಿ ತಾ.೧೭ ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವ ಅಲ್ಪಸಂಖ್ಯಾತ ಜನಾಂಗಗಳ ಹಕ್ಕುಗಳ ದಿನಾಚರಣೆಯ ಸಂದರ್ಭ ಸಾರ್ವತ್ರಿಕವಾಗಿ ಸಿಎನ್‌ಸಿ ತೋಕ್ ನಮ್ಮೆಯನ್ನು ಆಚರಿಸುತ್ತಾ ಬಂದಿದೆ ಮತ್ತು ಆ ಮೂಲಕ ಕೊಡವರ ಕೋವಿ ಹಕ್ಕಿನ ಕುರಿತು ಜಾಗೃತಿ ಮೂಡಿಸಿದೆ.

ವಿವಿಧೆಡೆಯಿಂದ ಆಗಮಿಸುವ ಕೊಡವರು ತಮ್ಮೊಂದಿಗೆ ತರುವ ತೋಕ್‌ಗಳಿಗೆ ಸಾಮೂಹಿಕವಾಗಿ ಭಕ್ತಿಭಾವದಿಂದ ಸಾರ್ವತ್ರಿಕ ಪೂಜೆ ನಡೆಸಿ ಪ್ರದರ್ಶಿಸಲಾಗುವುದು. ನಂತರ ಗುಂಡು ಹೊಡೆಯುವ ಪೈಪೋಟಿ ನಡೆಯಲಿದ್ದು, ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದರು.

ತೋಕ್ ಹಿಡಿದುಕೊಂಡು ಮಹಿಳೆಯರು ಹಾಗೂ ಪುರುಷರು ಕೊಡವ ಸಾಂಸ್ಕೃತಿಕ ನೃತ್ಯ ಮಾಡಲಿದ್ದಾರೆ. ಬೀರುಗ ದಕ್ಷಿಣ ಗಂಗೆ ಕೊಡವ ಸಾಂಸ್ಕೃತಿಕ ಕೂಟದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ೨೦೧೯ ರಿಂದ ವಿವಿಧ ಸಾಧಕರಿಗೆ ‘ಕೊಡವ ವಿಭೂಷಣ ಪ್ರಶಸ್ತಿ’ ನೀಡುತ್ತಾ ಬರಲಾಗಿದ್ದು, ಈ ಬಾರಿಯೂ ೬ ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.