ಗೋಣಿಕೊಪ್ಪ ವರದಿ, ಡಿ. ೧೩: ಮಾಯಮುಡಿ ಗ್ರಾಮದ ಕೋಲ್‌ಬಾಣೆ ಕಂಗಳತ್ತ್ನಾಡ್ ಮಂದ್‌ನಮ್ಮೆಯಲ್ಲಿ ಮಂದ್ ತೊರ್‌ಪೊ, ಮಂದ್ ಪತ್ತ್ವೊ, ಕೊಡವ ನೃತ್ಯ, ಸಾಧಕರಿಗೆ ಸನ್ಮಾನ, ಊರರ‍್ಮೆ ಕಾರ್ಯಕ್ರಮದಲ್ಲಿ ನಾಡಿನ ಜನರು ಪಾಲ್ಗೊಂಡು ಸಂಭ್ರಮಿಸಿದರು.

ಮಂದ್‌ಗೆ ಒಳಪಡುವ ಮಾಯಮುಡಿ, ಬಾಳಾಜಿ, ರುದ್ರಬೀಡು ಕೇರಿಯ ಜನರು ಪಾಲ್ಗೊಂಡುರು. ಬಾಳಾಜಿ, ರುದ್ರಬೀಡು ಕೇರಿಯ ಕೊಡವರು ಕುಪ್ಯಚೇಲೆ, ಮಂಡೆತುಣಿ, ಕೊಡವ ಸೀರೆಯಲ್ಲಿ ಪಟ್ಟ್ ಹಿಡಿದು ಮಂದ್ ಹತ್ತುವ ಕಾರ್ಯ ನಡೆಸಿದರು. ನಾಡ್‌ತಕ್ಕ ಬೊಳ್ಳಜೀರ ಜಿ. ದೇವಯ್ಯ ಪಟ್ಟ್ ಹಿಡಿದು ಸ್ವಾಗತಿಸಿಕೊಂಡರು. ಮೂರು ಕೇರಿಯ ಯುವಕರು ಕೋಲಾಟ್ ಮೂಲಕ ಮಂದ್ ಮರಿವೊ ಆಚರಣೆ ನಡೆಸಿಕೊಟ್ಟರು.

ಚಂಗುಲAಡ ಸೂರಜ್ ತಂಡದಿAದ ಕೋಲಾಟ್, ಪರೆಯಕಳಿ, ಬೊಳಕಾಟ್, ಹಾಗೂ ಉಮ್ಮತ್ತಾಟ್, ಚೆಟ್ಟಳ್ಳಿ ತಂಡದ ಉಮ್ಮತ್ತಾಟ್ ಪ್ರದರ್ಶನ ಕೊಡವ ಕಲೆಯನ್ನು ಬಿಂಬಿಸಿತು. ಪುತ್ತಾಮನೆ ವಿದ್ಯಾ ಜಗದೀಶ್, ನಾಳಿಯಮ್ಮಂಡ ಧನ್ಯ ಸುರೇಶ್ ಜೋಡಿ ಕೊಡವ ನೃತ್ಯದ ಮೂಲಕ ಜನಮನ ಗೆದ್ದರು. ಮಂದ್ ತೊರ್‌ಪೊ ಕಾರ್ಯಕ್ರಮವನ್ನು ಸಣ್ಣುವಂಡ ಕುಟುಂಬ ಅಧ್ಯಕ್ಷ ಸಣ್ಣುವಂಡ ಪಿ. ಸಂಪತ್ ನಡೆಸಿಕೊಟ್ಟರು. ಗ್ರಾಮದ ಸಣ್ಣುವಂಡ ಕೆ. ಕಾವೇರಮ್ಮ ಅವರಿಗೆ ೧೦೦ ವರ್ಷ (ಶತಾಯುಷಿ) ಪೂರೈಸಿದ ಸಂಭ್ರಮದಲ್ಲಿ ಊರರ‍್ಮೆ ಮೂಲಕ ಅನ್ನದಾನ ಕಾರ್ಯ ನಡೆಯಿತು.

ಕಂಗಳತ್ತ್ನಾಡ್ ಮಂದ್ ಸಮಿತಿ ಸಂಚಾಲಕ ಸಣ್ಣುವಂಡ ಬಿ. ರಮೇಶ್ ಮಾತನಾಡಿ, ಕೊಡವರಿಗೆ ಮಂದ್ ಕೂಡ ಐನ್‌ಮನೆಯಷ್ಟೆ ಶ್ರೇಷ್ಠತೆಯಾಗಿದೆ. ಮದುವೆಯಾದ ವರ್ಷ ಮಂದ್‌ಗೆ ಹತ್ತುವ ಆಚರಣೆ ಇದೆ. ಸಣ್ಣ ಮಕ್ಕಳನ್ನು ಕೂಡ ಮಂದ್‌ಗೆ ಕರೆತರುವುದು, ಮೊದಲ ಬಾರಿಗೆ ಕೊಡವ ಸಾಂಪ್ರಾದಾಯಿಕ ಉಡುಪು ತೊಡುವ ಗಂಡಸರು ಕೂಡ ಮಂದ್‌ಗೆ ಮೊದಲ ಬಾರಿ ಆಗಮಿಸಿ, ಕೋಲಾಟ್ ನಡೆಸುವ ಆಚರಣೆ ಹಿಂದಿನಿAದ ನಡೆದುಕೊಂಡು ಬರುತ್ತಿದೆ. ಇದನ್ನು ಉಳಿಸಿಕೊಳ್ಳುವುದು ಮುಖ್ಯ ಎಂದರು.

ಪೊನ್ನAಪೇಟೆ ಅರಣ್ಯ ಕಾಲೇಜು ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿ, ಪಟ್ಟೋಲೆ ಪಳಮೆ ಪುಸ್ತಕ ಸಾಂಸ್ಕೃತಿಕ ಬದುಕಿಗೆ ದಾರಿ ತೋರಿಸುತ್ತದೆ. ಓದುವ ಮೂಲಕ ನಮ್ಮ ಸಂಸ್ಕೃತಿ, ಆಚಾರ-ವಿಚಾರ ಪೋಷಿಸಬೇಕಿದೆ. ಮಣ್ಣು ಉಳಿಸಿಕೊಳ್ಳುವ ಜವಬ್ದಾರಿ ಎಲ್ಲರಿಗೂ ಅವಶ್ಯ ಎಂದರು.

ಪೊನ್ನAಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಸಂತತಿ ಅಳಿಯದಂತೆ ಕಾಪಾಡಿಕೊಳ್ಳಬೇಕು ಎಂದರು.

ಸನ್ಮಾನ: ಕಂಗಳತ್ತ್ನಾಡ್‌ಗೆ ಒಳಪಡುವ ಮಾಯಮುಡಿ ಗ್ರಾಮ ಪಂಚಾಯಿತಿ ಮಟ್ಟದ ಏಳು ಜನ ಸಾಧಕರನ್ನು ಸನ್ಮಾನಿಸಲಾಯಿತು. ಉದ್ಯೋಗ ಕ್ಷೇತ್ರದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕ್ಯಾ. ಮಲಚೀರ ಎ. ಅಯ್ಯಪ್ಪ ಅವರ ಪರವಾಗಿ ಅವರ ತಂದೆ ಮಲಚೀರ ಅಪ್ಪಣ್ಣ, ಶಿಕ್ಷಣದಲ್ಲಿ ಪೊನ್ನಂಪೇಟೆ ಅರಣ್ಯ ಕಾಲೇಜು ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, ಕ್ರೀಡೆಯಲ್ಲಿ ಕರಾಟೆ ಪಟು ಚೆಪ್ಪುಡೀರ ಅರುಣ್ ಮಾಚಯ್ಯ, ಸಮಾಜ ಸೇವೆಯಲ್ಲಿ ಚೆಪ್ಪುಡೀರ ರಾಧಾ ಅಚ್ಚಯ್ಯ, ಕೊಡವಾಮೆ ವಿಭಾಗದಲ್ಲಿ ಜಮ್ಮಡ ಸಿ. ಮೋಹನ್, ಸಂಘಟನೆಗೆ ಸಹಕಾರದಲ್ಲಿ ಮದ್ರೀರ ಕರುಂಬಯ್ಯ, ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಸಣ್ಣುವಂಡ ಕಿಶೋರ್ ನಾಚಪ್ಪ ಸನ್ಮಾನ ಸ್ವೀಕರಿಸಿದರು.