ಕೂಡಿಗೆ, ಡಿ. ೧೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ನಿವಾಸಿ ದೇವಾಯಿರ ಗಣಪತಿ ಅವರಿಗೆ ಸೇರಿದ ಎತ್ತು ಕಳೆದ ರಾತ್ರಿ ಚಿರತೆ ದಾಳಿಗೆ ಮೃತಪಟ್ಟಿದೆ. ಜೇನುಕಲ್ಲು ಬೆಟ್ಟ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದಾಳಿ ಮಾಡಿದ ಚಿರತೆ ಎತ್ತನ್ನು ಕೊಂದು ತಿಂದು ಹಾಕಿದೆ.