ನಾಪೋಕ್ಲು, ಡಿ. ೧೩: ಇಲ್ಲಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆ ವತಿಯಿಂದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಅಂತರ ಪ್ರೌಢಶಾಲಾ ಹಾಕಿ ಪಂದ್ಯಾಟದಲ್ಲಿ ಕೆಪಿಎಸ್ ಪೊನ್ನಂಪೇಟೆ ತಂಡ ಶ್ರೀ ರಾಮ ಟ್ರಸ್ಟ್ ತಂಡದ ವಿರುದ್ಧ ೧-೨ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಕೂಡಿಗೆಯ ಕ್ರೀಡಾಶಾಲೆಯ ತಂಡ ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲಾ ತಂಡದ ವಿರುದ್ಧ ೬-೦ ಅಂತರದಿAದ ಗೆಲುವು ಸಾಧಿಸಿತು.

ನಂತರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕೂಡಿಗೆಯ ಕ್ರೀಡಾಶಾಲೆ ತಂಡ ಪೊನ್ನಂಪೇಟೆಯ ಕೆಪಿಎಸ್ ವಿರುದ್ಧ ೬-೦ ಅಂತರದ ಮುನ್ನಡೆ ಸಾಧಿಸಿ ಫೈನಲ್ ಪ್ರವೇಶಿಸಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷ ಬೊಪ್ಪಂಡ ಡಾ. ಜಾಲಿ ಬೋಪಯ್ಯ, ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕ ಅಪ್ಪಾರಂಡ ಅಪ್ಪಯ್ಯ, ಬಿದ್ದಾಟಂಡ ಪಾಪು ಮುದ್ದಯ್ಯ ಕೊಂಬAಡ ಗಣೇಶ್, ಪ್ರೊ. ಕಲ್ಯಾಟಂಡ ಪೂಣಚ್ಚ, ಮಕ್ಕಿ ಸುಬ್ರಮಣ್ಯ ಭಟ್, ಬೊಪ್ಪಂಡ ಕುಶಾಲಪ್ಪ, ಬಿದ್ದಾಟಂಡ ಮುತ್ತಣ್ಣ, ಬೊಳ್ಳಚೆಟ್ಟೀರ ಸುರೇಶ್, ಅಪ್ಪಚೆಟ್ಟೋಳಂಡ ನವೀನ್, ನಾಯಕಂಡ ದೀಪು ಚಂಗಪ್ಪ. ಪ್ರಾಂಶುಪಾಲೆÀ ಶಾರದಾ ಅಪ್ಪಣ್ಣ, ಟ್ರಸ್ಟಿನ ಹಾಗೂ ವಿವಿಧ ಶಾಲಾ ಶಿಕ್ಷಕ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.