ಗೋಣಿಕೊಪ್ಪ ವರದಿ, ಡಿ. 12: ಕ್‍ಗ್ಗಟ್‍ನ್ನಾಡ್ ಫ್ಲೈಯಿಂಗ್ ಎಲ್ಬೋಸ್ ಅಸೋಸಿಯೇಷನ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಸೆವೆನ್ ಸೈಡ್ ಹಾಕಿ ಕಪ್ ಅನ್ನು ಕಕ್ಕಬ್ಬೆ ಮಲ್ಮ (ಬಿ) ತಂಡ ಮುಡಿಗೇರಿಸಿಕೊಂಡಿತು. ಫೈನಲ್‍ನಲ್ಲಿ ಸೋಲನುಭವಿಸಿದ ಕಿರುಗೂರು ತಂಡ ರನ್ನರ್ ಅಪ್‍ಗೆ ತೃಪ್ತಿಪಟ್ಟುಕೊಂಡಿತು. ಕಾಕೋಟುಪ ರಂಬು ಹಾಗೂ ಕಕ್ಕಬ್ಬೆ ಮಲ್ಮ (ಎ) ತಂಡಗಳು ಕ್ರಮವಾಗಿ 3 ಮತ್ತು 4 ನೇ ತಂಡವಾಗಿ ಹೊರಹೊಮ್ಮಿದವು.

ಫೈನಲ್ ಪಂದ್ಯದಲ್ಲಿ ಕಕ್ಕಬ್ಬೆ ಮಲ್ಮ (ಬಿ) ತಂಡವು 7-4 ಗೋಲುಗಳ ಅಂತರದಲ್ಲಿ ಕಿರುಗೂರು ತಂಡವನ್ನು ಸೋಲಿಸಿತು. ಕಕ್ಕಬ್ಬೆ ಮಲ್ಮ (ಬಿ) ಆಟಗಾರ ಫಾಹದ್ 1, 7 ಮತ್ತು 13 ನೇ ನಿಮಿಷಗಳಲ್ಲಿ 3 ಗೋಲು ಹೊಡೆದು ಮಿಂಚು ಹರಿಸಿದರು. 9, 12ನೇ ನಿಮಿಷಗಳಲ್ಲಿ ಅಪ್ಪಣ್ಣ, 10ನೇ ನಿಮಿಷದಲ್ಲಿ ಪಿ.ಕೆ. ಮುತ್ತಣ್ಣ, 22 ನೇ ನಿಮಿಷದಲ್ಲಿ ಪೊನ್ನಣ್ಣ ಒಂದೊಂದು ಗೋಲು ಹೊಡೆದರು. ಕಿರುಗೂರು ಆಟಗಾರ ಸೋಮಣ್ಣ 11 ಮತ್ತು 15ನೇ ನಿಮಿಷಗಳಲ್ಲಿ 2 ಗೋಲು, 20ನೇ ನಿಮಿಷದಲ್ಲಿ ಸಪನ್, 27ನೇ ನಿಮಿಷದಲ್ಲಿ ಬಿನ್ ಬೋಪಣ್ಣ ತಲಾ ಒಂದೊಂದು ಗೋಲು ಬಾರಿಸಿದರು.

ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಕಾಕೋಟುಪರಂಬು ತಂಡವು ಕಕ್ಕಬ್ಬೆ ಮಲ್ಮ (ಎ) ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಕಾಕೋಟುಪರಂಬು ಆಟಗಾರ ಧನುಶ್ ಜೋಡಿ ಗೋಲು ಹೊಡೆದರು.

ಮೊದಲ ಸೆಮಿ ಫೈನಲ್‍ನಲ್ಲಿ ಕಕ್ಕಬ್ಬೆ ಮಲ್ಮ (ಬಿ) ತಂಡವು ಕಕ್ಕಬ್ಬೆ ಮಲ್ಮ (ಎ) ತಂಡವನ್ನು 5-1 ಗೋಲು ಗಳಿಂದ ಮಣಿಸಿತು. ವಿಜೇತ ತಂಡದ ಆಟಗಾರ ಫಾಹದ್, ಕಾರ್ಯಪ್ಪ, ಯಶ್ವಂತ್, ಮುತ್ತಣ್ಣ, ಪೊನ್ನಣ್ಣ, ಸೋತ ತಂಡದ ಆಟಗಾರ ಮಿಲನ್ ತಲಾ ಒಂದೊಂದು ಗೋಲು ಹೊಡೆದರು.

2ನೇ ಸೆಮಿಫೈನಲ್‍ನಲ್ಲಿ ಕಿರುಗೂರು (ಮೊದಲ ಪುಟದಿಂದ) ತಂಡವು ಕಾಕೋಟುಪರಂಬು ತಂಡವನ್ನು 4-3 ಗೋಲುಗಳ ರೋಚಕ ಗೆಲುವು ದಾಖಲಿಸಿತು. ಕಿರುಗೂರು ತಂಡದ ಸಪನ್ ಅಯ್ಯಪ್ಪ 2, ಬೋಪಣ್ಣ, ಸೋಮಣ್ಣ, ಕಾಕೋಟುಪರಂಬು

ತಂಡದ ಆರ್ಯನ್, ಬೋಪಣ್ಣ, ಧನುಷ್ ತಲಾ ಒಂದೊಂದು ಗೋಲು ಹೊಡೆದರು.

ಪ್ರಶಸ್ತಿಗಳು: ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪೊಕ್ಕಳಿಚಂಡ ಸಪನ್, ಹೆಚ್ಚು ಗೋಲ್ ಸ್ಕೋರರ್ ಬಹುಮಾನವನ್ನು ಯಶ್ವಂತ್, ಧನುಶ್, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಅರೆಯಡ ಸಿ. ಗಣಪತಿ, ಬೆಸ್ಟ್ ಅಪ್ ಕಮಿಂಗ್ ಪ್ರಶಸ್ತಿಯನ್ನು ಬಿನ್ ಗಣಪತಿ, ಬೆಸ್ಟ್ ಫಾರ್ವರ್ಡ್ ಪ್ರಶಸ್ತಿಯನ್ನು

ಧನುಶ್ ಕಾವೇರಪ್ಪ, ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಫಹಾದ್ ಪಡೆದುಕೊಂಡರು. ಫೇರ್‍ಪ್ಲೇ ಪ್ರಶಸ್ತಿಯನ್ನು ಹುದಿಕೇರಿ ಅಂಜಿಕೇರಿನಾಡ್ ತಂಡ ಗೆದ್ದುಕೊಂಡಿತು.

ಕರ್ನಾಟಕ ಉಚ್ಚ ನ್ಯಾಯಾಲಯ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ, ಅಹಮದಾಬಾದ್ ಇನ್‍ಕಂ ಟ್ಯಾಕ್ಸ್ (ಅಸೆಸ್‍ಮೆಂಟ್) ಡೆಪ್ಯೂಟಿ ಕಮಿಷನರ್ ಆಗಿರುವ ಸ್ಥಳೀಯರಾದ ವೈದ್ಯ ಡಾ. ಕೊಟ್ಟಂಗಡ ಪೆಮ್ಮಯ್ಯ, ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಅಂತರ್ರಾಷ್ಟ್ರೀಯ ಮಾಜಿ ಆಟಗಾರ ಕರ್ನಲ್. ಬಾಳೆಯಡ ಸುಬ್ರಮಣಿ, ಪಳಂಗಂಡ ಲವಕುಮಾರ್, ಕ್‍ಗ್ಗಟ್‍ನಾಡ್ ಫ್ಲೈಯಿಂಗ್ ಎಲ್ಬೋಸ್ ಅಸೋಸಿಯೇಷನ್ ಅಧ್ಯಕ್ಷ ಚಿರಿಯಪಂಡ ಪವನ್ ಬಿದ್ದಪ್ಪ, ಉಪಾಧ್ಯಕ್ಷ ಕೂಕಂಡ ಬಿದ್ದಪ್ಪ, ಕಾರ್ಯದರ್ಶಿ ಮಾಚಿಮಾಡ ಕಾರ್ಯಪ್ಪ, ಖಜಾಂಚಿ ತಾಣಚ್ಚೀರ ನಿಖಿಲ್, ಜಂಟಿ ಕಾರ್ಯದರ್ಶಿ ಚಿರಿಯಪಂಡ ಸೌರಭ್ ಬಹುಮಾನ ವಿತರಿಸಿದರು.