ಮಡಿಕೇರಿ, ಡಿ. 12 : ಚೇರಂಬಾಣೆ ಗೌಡ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆ ವತಿಯಿಂದ ತಾ. 25 ರಿಂದ ಗ್ರಾಮ, ಗ್ರಾಮಗಳ ನಡುವಿನ ಕೊಡಗು ಗೌಡ ಜನಾಂಗದ ಕ್ರಿಕೆಟ್ ಪಂದ್ಯಾವಳಿ ಹಾಗೂ .22 ಮತ್ತು 12 ಬೋರ್ ಬಂದೂಕಿನಿಂದ ಗುರಿ ಇಡುವ ಸ್ಪರ್ಧೆ ನಡೆಯಲಿದೆ.
ಪುರುಷರ ಹಾಗೂ ಮಹಿಳೆಯರ ಮುಕ್ತ ಪಂದ್ಯಾವಳಿ ಇದಾಗಿದ್ದು, ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾ.25 ರಂದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಆಕರ್ಷಕ ನಗದು ಮತ್ತು ಟ್ರೋಫಿಯನ್ನು ನೀಡಲಾಗುವುದು.
ಅಲ್ಲದೆ ಪಂದ್ಯಶ್ರೇಷ್ಠ, ಉತ್ತಮ ಎಸೆತಗಾರ, ಉತ್ತಮ ಕ್ಷೇತ್ರ ರಕ್ಷಕ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಕೂರನ ಪ್ರವೀಣ್-8762897167, ಕಟ್ಟೆಮನೆ ರಾಜೇಶ್-7483976628, ಹಾಗೂ 0.22 ಮತ್ತು 12 ಬೋರ್ ಬಂದೂಕಿನಿಂದ ಗುರಿ ಇಡುವ ಸ್ಪರ್ಧೆಗೆ ಹೆಸರು ನೋಂದಾಯಿಸಲು ಪುದಿಯನೆರವನ ರಿಷಿತ್ ಮಾದಯ್ಯ - 9972376151 ಸಂಪರ್ಕಿಸಬಹುದಾಗಿದೆ.