ಕುಶಾಲನಗರ, ಡಿ. 12: ಕುಶಾಲನಗರ ಪಟ್ಟಣ ಪಂಚಾಯಿತಿ ಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಪುರಸಭೆಯನ್ನಾಗಿಸಲು ಈ ಹಿಂದೆ ಇದ್ದ ಆಕ್ಷೇಪಣೆಗಳು ತೆರವುಗೊಂಡ ಹಿನ್ನೆಲೆಯಲ್ಲಿ ಆದೇಶ ಹೊರ ಬಿದ್ದಿದೆ. ಕುಶಾಲನಗರ ಪಟ್ಟಣ, ಮುಳ್ಳುಸೋಗೆ ಕಂದಾಯ ಗ್ರಾಮ ಮತ್ತು ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿಯ ಮಾದಪಟ್ಟಣ ಗ್ರಾಮದ ಆಯ್ದ ಪ್ರದೇಶಗಳನ್ನು ಒಳಗೊಂಡಂತೆ ಪುರಸಭೆ ವ್ಯಾಪ್ತಿಗೆ ನಿಗದಿಪಡಿಸಿದೆ.