ಮಡಿಕೇರಿ, ಡಿ. 12: ಅಂತರರಾಷ್ಟ್ರೀಯ ಸ್ಕ್ವಾಶ್ ಆಟಗಾರ್ತಿ ಕೊಡಗಿನ ಕುಟ್ಟಂಡ ಜೋಶ್ನಾ ಚಿನ್ನಪ್ಪ ಅವರು ಚೆನ್ನೈನಲ್ಲಿ ನಡೆದ 78ನೆಯ ರಾಷ್ಟ್ರೀಯ ಸ್ಕ್ವಾಶ್ ಚಾಂಪಿಯನ್‍ಶಿಪ್‍ನ ಅಂತಿಮ ಪಂದ್ಯದಲ್ಲಿ ಅನಾಹತ್ ಸಿಂಗ್ ಅವರನ್ನು 3-0 ನೇರ ಸೆಟ್‍ಗಳಲ್ಲಿ ಮಣಿಸಿ 19ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಫೈನಲ್ ಪಂದ್ಯದಲ್ಲಿ 3 ನೇರ ಸೆಟ್‍ಗಳಲ್ಲಿ ಜೋಶ್ನಾ ಗೆಲುವು ಸಾಧಿಸಿದರು. ಪಂದ್ಯಾಟವು ರೋಮಾಂಚನಕಾರಿಯಾಗಿ (ಮೊದಲ ಪುಟದಿಂದ) ನಡೆಯಿತು. 14 ವರ್ಷದ ಯುವ ಆಟಗಾರ್ತಿ ಅನಾಹತ್ ಸಿಂಗ್ 36 ವರ್ಷದ ಜೋಶ್ನಾ ಅವರಿಗೆ ತೀವ್ರ ಪೈಪೋಟಿ ನೀಡಿದರೂ 11-8, 11-9, 11-9 ಅಂಕಗಳೊಂದಿಗೆ 3 ಸೆಟ್‍ಗಳಲ್ಲೂ ಅನುಭವಿ ಆಟಗಾರ್ತಿ ಜೋಶ್ನಾ ಜಯ ಸಾಧಿಸಿದರು.