ನಾಪೋಕ್ಲು, ಡಿ. ೧೧: ೧೯೦೫ ರಲ್ಲಿ ಪ್ರಾರಂಭವಾದ ಸಹಕಾರ ಕ್ಷೇತ್ರವು ಜಿಲ್ಲೆಯಲ್ಲಿ ಉತ್ತಮ ಬೆಳವಣಿಗೆ ಯನ್ನು ಸಾಧಿಸಿದ್ದು ಕೊಡಗಿಗೆ ಮಾದರಿಯಾಗಿ ಉಳಿದಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿ ಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು. ಇಲ್ಲಿಗೆ ಸಮೀಪದ ಪಾರಾಣೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಪೋಕ್ಲು ಭಾಗದಲ್ಲಿ ಕೆಲವು ಸಹಕಾರ ಸಂಘಗಳು ಶತಮಾನೋತ್ಸವ ಪೂರೈಸಿವೆ. ರೈತರಿಗೆ ನೆರವು ನೀಡುತ್ತಿದ್ದು ರೈತರ ಅಭಿವೃದ್ಧಿಗೆ ಸಹಕಾರ ಸಂಘಗಳ ಕೊಡುಗೆ ಮಹತ್ವದ್ದು. ಸರ್ಕಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ ಮಾತನಾಡಿ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಹಿರಿಯರು ಕಾರಣ ಸಹಕಾರ ಸಂಘಗಳು ರಾಜಕೀಯ ರಹಿತವಾಗಿ ಕಾರ್ಯ ನಿರ್ವಹಿಸಿ ಇನ್ನೂ ಹೆಚ್ಚಿನ ಬೆಳವಣಿಗೆ ಕಾಣುವಂತಾಗಲಿ ಎಂದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕನ್ನಂಡ ಎ. ಸಂಪತ್ ಮಾತನಾಡಿ, ಸಹಕಾರ ತತ್ವದಿಂದ ಮಾತ್ರ ಸಂಘ ಬೆಳೆಯಲು ಸಾಧ್ಯ ಸದಸ್ಯರ ಸಂಪೂರ್ಣ ಸಹಕಾರದಿಂದ ಸಂಘಗಳು ಅಭಿವೃದ್ಧಿ ಹೊಂದುತ್ತಿವೆ ಎಂದರು.
ನಿರ್ದೇಶಕ ಪೆಬ್ಬಾಟಂಡ ಎ. ಪೆಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಪಾರಾಣೆ ಸಹಕಾರ ಸಂಘವು ೧೯೭೨ ರಲ್ಲಿ ಸ್ಥಾಪನೆಯಾಗಿ ಇಂದಿಗೆ ೫೦ ವರ್ಷಗಳು ಸಂದಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪುನಶ್ಚೇತನ ಧನ ಸಹಾಯದಿಂದ ಸಂಘವು ಈಗ ಲಾಭದ ಹಾದಿಯಲ್ಲಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಸದಸ್ಯರು ೧೦ ಲಕ್ಷ ರೂಪಾಯಿ ನೀಡಿದ್ದು ಸಂಘ ಪ್ರಗತಿಯಲ್ಲಿದೆ ಎಂದರು.
ಸಮಾರAಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾಗಿದ್ದ ೧೩ ಜನರಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆ.ಎ. ದೇವಯ್ಯ, ಕೆ.ಜಿ. ಪ್ರಭಾಂನAದ, ತೆಕ್ಕಡೆ ಶೋಭಾ ಮೋಹನ್ ಅವರನ್ನು ಹಾಗೂ ಮಾಜಿ ವ್ಯವಸ್ಥಾಪಕರಾದ ಎ.ಎಂ. ಜೋಯಪ್ಪ, ಎಂ.ಕೆ. ರತಿ, ಯು.ಟಿ. ಚಂದ್ರಾವತಿ ಹಾಗೂ ಕೆ.ಎಸ್. ಗೌರಿ ಮತ್ತು ಮಾಜಿ ನಿರ್ದೇಶಕರುಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಂಘದ ನಿರ್ದೇಶಕರು ,ವ್ಯವಸ್ಥಾಪಕ ಬೋಳಕಾರಂಡ ಮಂಜು ಮಾಚಯ್ಯ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಮಾರಂಭ ಅಧ್ಯಕ್ಷತೆಯನ್ನು ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಪ್ಪ ನೆರವಂಡ ಎಂ.ಪೂವಯ್ಯ ಅವರು ವಹಿಸಿದ್ದು, ಮೈಂದಪAಡ ವಾಣಿ ಪ್ರಾರ್ಥಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪೆಬ್ಬಾಟಂಡ ಎ. ಪೆಮ್ಮಯ್ಯ ಸ್ವಾಗತಿಸಿದರು. ವ್ಯವಸ್ಥಾಪಕ ಬೋಳಕಾರಂಡ ಮಂಜು ಮಾಚಯ್ಯ ಕಾರ್ಯಕ್ರಮವನ್ನು ನಿರೂಪಿಸಿ, ನಿರ್ದೇಶಕ ನಾಯಕಂಡ ಟಿ. ಮುತ್ತಪ್ಪ ವಂದಿಸಿದರು.