ಸುಂಟಿಕೊಪ್ಪ, ಡಿ. ೧೧: ವಿದ್ಯಾರ್ಥಿಗಳು ಎಲ್ಲಾ ಸಮುದಾಯದ ವರೊಂದಿಗೆ ಸೌಹಾರ್ದತೆಯಿಂದ ಪ್ರೀತಿಯಿಂದ, ಶಿಸ್ತುಬದ್ಧ ಜೀವನ ರೂಢಿಸಿಕೊಂಡು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕೆAದು ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟಾçರ್ ಪ್ರೊ: ಪಿ.ಎಲ್. ಧರ್ಮ ಕರೆ ನೀಡಿದರು. ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯರನ್ನಾಗಿ ದೇವರು ನಮ್ಮನ್ನು ಹುಟ್ಟಿಸಿದ್ದು, ಬಹುದೊಡ್ಡ ಕೊಡುಗೆ ಯಾಗಿದೆ, ಸತತ ಶ್ರಮ ಶ್ರದ್ಧೆಯಿಂದ ಜೀವನದ ಗುರಿ ಮುಟ್ಟಬೇಕು. ಬಡವರು ಎಂಬ ಕೀಳರಿಮೆ ಸಲ್ಲದು. ದೇಶಪ್ರೇಮ ಮೈಗೂಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪಡೆದ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಕೊಡಗಿನಲ್ಲಿ ಜೀವನ ಕಟ್ಟಿಕೊಳ್ಳಲು ಪೂರಕವಾದ ಎಲ್ಲಾ ವಾತಾವರಣವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ನಿವೃತ್ತ ಕರ್ನಲ್ ಬಿಜಿವಿ ಕುಮಾರ್ ವಿದ್ಯಾರ್ಥಿಗಳು ಗುರಿ ಇಟ್ಟುಕೊಳ್ಳಬೇಕು. ಅದನ್ನು ಶಕ್ತಿ, ಹಠ, ಶ್ರಮದಿಂದ ಸಾಧಿಸಬೇಕು. ಪೋಷಕರು ತಮ್ಮ ಜವಾಬ್ಧಾರಿಯನ್ನು ಮರೆಯಬಾರದು. ಸಂಸ್ಕಾರ, ಸಭ್ಯತೆ, ಸ್ವಚ್ಛತೆಯನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಶಿಕ್ಷಕರು ವಿದ್ಯೆಯನ್ನು ಕಲಿಸುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಾರೆ. ಪೋಷಕರು ಜವಾಬ್ದಾರಿ ಮರೆಯಬಾರದು ಎಂದು ಸೂಚ್ಯವಾಗಿ ಹೇಳಿದರು.

ಸಮಾರಂಭದ ವೇದಿಕೆಯಲ್ಲಿ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಎಂ.ಜಿ. ಬೋಪಣ್ಣ, ಸದಸ್ಯರುಗಳಾದ ಕೋದಂಡ ಮುದ್ದಪ್ಪ, ಪಿ.ಎ. ನಾಣಿಯಪ್ಪ, ಎಂ.ಸಿ. ಬೋಜಮ್ಮ ಹಾಗೂ ಮುಕುಲ್ ಮಹೇಂದ್ರ ಉಪಸ್ಥಿತರಿದ್ದರು.

ಮೊದಲಿಗೆ ಚೆನ್ನಮ್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಎನ್‌ಸಿಸಿ ವಿದ್ಯಾರ್ಥಿಗಳು ಅತಿಥಿಗಳಿಗೆ ಪೆರೇಡ್ ಮೂಲಕ ಧ್ವಜವಂದನೆ ಸಲ್ಲಿಸಿದರು.

ವಿದ್ಯಾರ್ಥಿಗಳು ಪಿರಮಿಡ್ ಅಂಗಸಾಧನೆ ಅತ್ಯದ್ಭುತವಾಗಿತ್ತು. ಪೋಷಕರ, ಸಾರ್ವಜನಿಕರ ಮನಸೂರೆಗೊಂಡಿತು. ವಿದ್ಯಾರ್ಥಿನಿಯರಿಂದ ಭುವನೇಶ್ವರಿಯ ನೃತ್ಯರೂಪ, ತಮಿಳುನಾಡಿನ ಭರತನಾಟ್ಯ, ಕೇರಳದ ಕಥಕಳಿ, ಆಂಧ್ರಪ್ರದೇಶದ ಕೂಚುಪುಡಿ ನೃತ್ಯ, ಮಣಿಪುರದ ಮಣಿಪುರಿ ನೃತ್ಯ ಜನಮನ್ನಣೆಗಳಿಸಿತು.

ವಿದ್ಯಾರ್ಥಿಗಳ ಸಾಮೂಹಿಕ ಅಂಗಸಾಧನೆ ನಡೆಯಿತು. ಚೆನ್ನಮ್ಮ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಮಂದಪ್ಪ ವರದಿ ವಾಚಿಸಿದರು ಮೊದಲಿಗೆ ಅಧ್ಯಾಪಕ ರಾಜ ಸುಂದರನ್ ಸ್ವಾಗತಿಸಿ, ವಿದ್ಯಾರ್ಥಿನಿ ಅದಮ್ಯ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಶಿಕ್ಷಕಿ ರೇವತಿ ವಂದಿಸಿದರು.