ಮಡಿಕೇರಿ, ಡಿ. ೯: ಮಡಿಕೇರಿ ನಗರದ ಮಹದೇವಪೇಟೆಯ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಬಡಾವಣೆಯ ಅಬ್ದುಲ್ ಕಲಾಂ ಸೌಹಾರ್ದ ಸಮಿತಿಯ ಸಭೆ ಸಮಿತಿ ಅಧ್ಯಕ್ಷ ಎಂ.ಎ. ಸಾದಿಕ್ ಸಾಧು ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಬಡಾವಣೆಯಲ್ಲಿ ನಡೆಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನಾಗಿ ಪಾಡಿಯಂಡ ಮಣಿ ಮೇದಪ್ಪ ಹಾಗೂ ಎಂ.ಎ. ನಾಸಿಕ್ ಅವರನ್ನು ಆರಿಸಿಕೊಳ್ಳಲಾಯಿತು. ಈ ಸಭೆಯಲ್ಲಿ ಸಮಿತಿ ಪದಾಧಿಕಾರಿಗಳಾದ ಕೌಸರ್, ರಜಾಕ್, ಆಸೀಫ್, ಪರವಂಡ ಉಸ್ಮಾನ್, ಫಯಾನ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್ ಸ್ವಾಗತಿಸಿದರು. ಉಪಾಧ್ಯಕ್ಷ ಟಿ.ಆರ್. ಜೀವನ್ ವಂದಿಸಿದರು.