ಚೆಟ್ಟಳ್ಳಿ, ಡಿ. ೯: ಸುಂಟಿಕೊಪ್ಪ ಸಮೀಪದ ಅಮಿಟಿ ಯುನೈಟೆಡ್ ಗದ್ದೆಹಳ್ಳದ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಐದನೇ ವರ್ಷದ ರಾಷ್ಟçಮಟ್ಟದ ಹೊನಲು ಬೆಳಕಿನ ಸೂಪರ್ ಫೈವ್ಸ್ ಮುಕ್ತ ಕಾಲ್ಚೆಂಡು ಪಂದ್ಯಾವಳಿ ಜ. ೨೪ ರಿಂದ ೨೬ ರವರೆಗೆ ಗದ್ದೆಹಳ್ಳದ ಸೈಟ್ ಮೈದಾನದಲ್ಲಿ ನಡೆಯಲಿದೆ ಎಂದು ಅಮಿಟಿ ಯುನೈಟೆಡ್ ವ್ಯವಸ್ಥಾಪಕ ನೌಫಲ್ ತಿಳಿಸಿದ್ದಾರೆ. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ನಗದು, ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಆಸಕ್ತ ತಂಡಗಳು ೮೪೩೧೨೩೫೨೧೭, ೬೩೬೬೬೮೦೯೩೧ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ತಂಡವನ್ನು ನೋಂದಣಿ ಮಾಡಿಕೊಳ್ಳಬಹುದೆಂದು ಆಯೋಜಕ ನೌಫಲ್ ತಿಳಿಸಿದ್ದಾರೆ.