ಚೆಯ್ಯAಡಾಣೆ, ಡಿ. ೯. ಯುಎಇ ರಾಷ್ಟಿçÃಯ ದಿನಾಚರಣೆಯ ಪ್ರಯುಕ್ತ ಯುಎಇಯಲ್ಲಿ ನೆಲೆಸಿರುವ ಕೊಡಗಿನ ಅನಿವಾಸಿಗಳಿಗೆ ಅಜ್ಮಾನ್ ಅಕಾಡೆಮಿ ಮೈದಾನದಲ್ಲಿ ಗುಂಡಿಕೆರೆಯ ಮೀತಲ್ತಂಡ ಅಕ್ಬರ್ ಪ್ರಾಯೋಜ ಕತ್ವದಲ್ಲಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾಟದಲ್ಲಿ ಕೊಂಡAಗೇರಿ ತಂಡವು ಆರ್ ವೈ ಸಿ ಎಮ್ಮೆಮಾಡು ತಂಡವನ್ನು ಮಣಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರ್‌ವೈಸಿ ತಂಡವು ರನ್ನರ್ಸ್ ಪ್ರಶಸ್ತಿಗೆ ಭಾಜನವಾಯಿತು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಕೊಂಡAಗೇರಿ ತಂಡವು ಗುಂಡಿಕೆರೆಯ ಸ್ಟಾರ್ ಬಾಯ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಆರ್‌ವೈಸಿ ಎಮ್ಮೆಮಾಡು ತಂಡವು ಕೊಟ್ಟಮುಡಿ ತಂಡವನ್ನು ಮಣಿಸುವುದರ ಮೂಲಕ ಫೈನಲ್ ಹಂತಕ್ಕೆ ಪ್ರವೇಶಿಸಿತ್ತು.
ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಯುಎಇ ನಾಯಕರುಗಳು, ಮುಖ್ಯ ಅತಿಥಿಗಳಾಗಿ ನಾಪೋಕ್ಲು ಅಲ್ ಜೂಕ್ ಹೊಟೇಲ್ ಮಾಲೀಕ ಸಲೀಂ, ಕಾಂಗ್ರೆಸ್ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಹಂಝ ಕೊಟ್ಟಮುಡಿ, ಗಫೂರ್ ಜೀಮೇಕ್ ಎಮ್ಮೆಮಾಡು, ಲತೀಫ್ ಸಿ.ಎ. ಗುಂಡಿಕೆರೆ, ಇಸಿಸಿ ಕಾರ್ಗೋ ಮಾಲೀಕ ಅಶ್ರಫ್ ಎಮ್ಮೆಮಾಡು, ಹನೀಫಾ ಅಕ್ಕಳತಂಡ, ಸೈದು ಮೀತಲ್ತಂಡ, ಹಂಝ ಡಾಟ್ ವೀಲ್ ಮಾಲೀಕ, ಶರ್ಪು ಬೆಟ್ಟಗೇರಿ ಮುಂತಾದವರು ಉಪಸ್ಥಿತರಿದ್ದರು.
ಪಂದ್ಯಾಟದ ತೀರ್ಪುಗಾರರಾಗಿ ಗುಂಡಿಕೆರೆಯ ಹುಸೈನ್ ಬೈಕೆಪುರೆ ಹಾಗೂ ನಿಝಾರ್ ಕುವೇಂಡ ಕಾರ್ಯನಿರ್ವಹಿಸಿದರು.