ಸೋಮವಾರಪೇಟೆ, ಡಿ. ೯: ಇಲ್ಲಿನ ಸಂಸ್ಕೃತ ಭಾರತಿ ಹಾಗೂ ಶ್ರೀ ಸೋಮೇಶ್ವರ ದೇವಾಲಯ ಸಮಿತಿ ಸಹಯೋಗದಲ್ಲಿ ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಗೀತ ಜಯಂತಿ ಕಾರ್ಯಕ್ರಮ ನಡೆಯಿತು.
ಶ್ರೀ ಭಗವದ್ಗೀತೆಯ ಧ್ಯಾನ ಶ್ಲೋಕಗಳನ್ನು ಮತ್ತು ೧೨ನೇ ಅಧ್ಯಾಯದ ಭಕ್ತಿ ಯೋಗ ಶ್ಲೋಕಗಳನ್ನು ಪಾರಾಯಣ ಮಾಡಲಾಯಿತು. ಸಂಸ್ಕೃತ ಭಾರತಿ ಸಂಚಾಲಕರಾದ ಚಂದ್ರಹಾಸ್ ಭಟ್, ೧೨ನೇ ಅಧ್ಯಾಯದಲ್ಲಿ ಬರುವ ಕೃಷ್ಣಾರ್ಜುನರ ಸಂವಾದ, ಸಂಭಾಷಣೆಯನ್ನು ಸವಿಸ್ತಾರವಾಗಿ ತಿಳಿಸಿದರು.
ಪುಟಾಣಿ ಮಕ್ಕಳು ವಟು ವೇಷಧಾರಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದರು. ಪದ್ಮಾವತಿ, ಅರ್ಚನಾ ಶ್ರೀಕಾಂತ್, ಸ್ಪಟಿಕಾ, ಚಂದ್ರಕಲಾ, ಮತ್ತಿತರರು ಶ್ಲೋಕಗಳ ಪಾರಾಯಣ ಮಾಡಿದರು.
ದೇವಾಲಯದ ಸಮಿತಿ ಕಾರ್ಯದರ್ಶಿ ಎಸ್.ಡಿ. ವಿಜೇತ್ ಅಧ್ಯಕ್ಷತೆ ವಹಿಸಿದ್ದರು. ಚೌಡ್ಲು ವಿ.ಎಸ್.ಎಸ್.ಎನ್. ಬ್ಯಾಂಕ್ ವ್ಯವಸ್ಥಾಪಕರಾದ ವೈ.ಪಿ. ಹರೀಶ್, ಪಟ್ಟಣ ಪಂಚಾಯಿತಿ ಸದಸ್ಯ ಮೃತ್ಯುಂಜಯ, ನಾಗರಾಜ್ ವೇದಿಕೆಯಲ್ಲಿದ್ದರು. ಗಣೇಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.