ಸೋಮವಾರಪೇಟೆ, ಡಿ. ೯: ಮನೆಗಳಿಗೆ ಬೆಳಕು ನೀಡುವ ವಿದ್ಯುತ್ ತಂತಿಗಳಲ್ಲಿ 'ಹೈ ವೋಲ್ಟೇಜ್' ವಿದ್ಯುತ್ ಪ್ರವಹಿಸಿದ ಪರಿಣಾಮ ಹಲವು ಮನೆಗಳು ಕತ್ತಲೆಯ ಕೂಪಕ್ಕೆ ತುತ್ತಾಗಿ, ಎಲೆಕ್ಟಾçನಿಕ್ ವಸ್ತುಗಳು ನಷ್ಟವಾದ ಘಟನೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಇರುವ ಹಾನಗಲ್ಲು ಬಾಣೆಯಲ್ಲಿ ಸಂಭವಿಸಿದೆ.

ಪಟ್ಟಣ ಸಮೀಪದ ಹಾನಗಲ್ಲು ಬಾಣೆ ಗ್ರಾಮದಲ್ಲಿ ಈಗಾಗಲೇ ೬೬ ಕೆ.ವಿ. ವಿದ್ಯುತ್ ಸಂಗ್ರಹಾಗಾರ/ ಪ್ರಸರಣ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದ್ದು, ಇಂದು ಮಧ್ಯಾಹ್ನದ ವೇಳೆಗೆ ವಿದ್ಯುತ್ ತಂತಿಗೆ ಮರದ ಕೊಂಬೆಯೊAದು ಬಿದ್ದ ಪರಿಣಾಮ ಹೈ ವೋಲ್ಟೇಜ್ ಹರಿದು ಹಲವು ಮನೆಗಳ ಎಲೆಕ್ಟಾçನಿಕ್ ಉಪಕರಣಗಳು, ಗೃಹೋಪಯೋಗಿ ವಸ್ತುಗಳು ನಾಶವಾಗಿವೆ.

ಇಂದು ಮಧ್ಯಾಹ್ನದ ವೇಳೆಗೆ ಹಾನಗಲ್ಲು ಗ್ರಾಮದಿಂದ ಎ.ಇ.ಇ. ಕಚೇರಿ ಇರುವ ಮಾರ್ಗಕ್ಕೆ ಸಂಪರ್ಕಗೊAಡಿರುವ ಲೈನ್‌ಗೆ ಮರದ ಸಣ್ಣ ಕೊಂಬೆಯೊAದು ಬಿದ್ದು ಎರಡು ತಂತಿಗಳು ಸ್ಪರ್ಶಿಸಿದ್ದರ ಪರಿಣಾಮ ಹೈ ವೋಲ್ಟೇಜ್ ವಿದ್ಯುತ್ ಪ್ರವಹಿಸಿದೆ.

ಪರಿಣಾಮ ಹಾನಗಲ್ಲು ಬಾಣೆ ಗ್ರಾಮದ ವಸಂತಿ ರಾಮು, ಗಗನ್ ರಾಜು, ರವೀಂದ್ರ, ವೆಂಕಟೇಶ್, ಸ್ವಾಮಿ ಸೇರಿದಂತೆ ಹತ್ತಾರು ಮನೆಗಳ ಟಿ.ವಿ., ಫ್ಯಾನ್, ಐರನ್ ಬಾಕ್ಸ್, ಬಲ್ಬ್ಗಳು, ವಯರಿಂಗ್ ಸೇರಿದಂತೆ ಇನ್ನಿತರ ಎಲೆಕ್ಟಾçನಿಕ್ ಪರಿಕರಗಳು ಸುಟ್ಟು ಕರಕಲಾಗಿವೆ.

ಬಹುತೇಕ ಕೂಲಿ ಕಾರ್ಮಿಕ ಕುಟುಂಬಗಳೇ ಅಧಿಕವಿರುವ ಗ್ರಾಮದಲ್ಲಿ ಎಲ್ಲರೂ ಕೆಲಸಕ್ಕೆ ತೆರಳಿದ್ದು, ಸಂಜೆ ಮನೆಗೆ ವಾಪಸ್ಸಾದ ಸಂದರ್ಭ ಮನೆಯಲ್ಲಿ ಉಂಟಾಗಿರುವ ನಷ್ಟದ ಬಗ್ಗೆ ತಿಳಿದುಬಂದಿದೆ.

ಸೆಸ್ಕ್ ಇಲಾಖೆಯವರು ನಮಗೆ ಪರಿಹಾರ ನೀಡಬೇಕು. ಕಷ್ಟಪಟ್ಟು ಸಂಪಾದಿಸಿದ ವಸ್ತುಗಳು ಕರೆಂಟ್‌ಗೆ ಸಿಲುಕಿ ಹಾಳಾಗಿವೆ' ಎಂದು ನಷ್ಟಕ್ಕೊಳಗಾದವರು ಮನವಿ ಮಾಡಿದ್ದಾರೆ.