ಮಡಿಕೇರಿ, ಡಿ. ೯: ಜಿಲ್ಲೆಯ ಎಲ್ಲಾ ಮಾಜಿ ಸೈನಿಕರಿಗೆ ಹಾಗೂ ಅವರ ಕುಟುಂಬದವರಿಗೆ ಕ್ರೀಡಾಕೂಟ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ ತಾ. ೧೮ ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟುಕತ್ತೀರ ಪಿ. ಸೋಮಣ್ಣ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ. ಪುರುಷರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ವಿವಿಧ ಹಂತದ ಓಟ, ಮಹಿಳೆಯರಿಗೆ ಹಗ್ಗಜಗ್ಗಾಟ, ಪಾಸಿಂಗ್ ದಿ ಬಾಲ್, ಸಂಗೀತ ಕುರ್ಚಿ, ಲೆಮೆನ್ ಆ್ಯಂಡ್ ಸ್ಪೂನ್, ಭಾರದ ಗುಂಡು ಎಸೆತ, ೧೦೦ ಹಾಗೂ ೨೦೦ ಮೀಟರ್ ಓಟ, ನಿಧಾನಗತಿ ಓಟ, ಮಕ್ಕಳಿಗೆ ಕಾಳುಹೆಕ್ಕುವುದು ಸೇರಿದಂತೆ ವಿವಿಧ ಹಂತದ ಓಟದ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ಎಸ್. ಸುಧೀರ್ ಮಾತನಾಡಿ, ಬೆಳಿಗ್ಗೆ ೯ ಗಂಟೆಗೆ ಕ್ರೀಡಾಸಾಧಕರು ಓಂಕಾರೇಶ್ವರ ದೇವಾಲಯದಿಂದ ವಿಜಯ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಆ ಬಳಿಕ ಕ್ರೀಡಾಕೂಟ ಆರಂಭಗೊಳ್ಳಲಿದೆ. ಅಲ್ಲಿಯೇ ಮಾಜಿ ಸೈನಿಕರಿಗೆ ಹಾಗೂ ಕುಟುಂಬಕ್ಕೆ ಬಿಪಿ, ಶುಗರ್ ಸೇರಿದಂತೆ ಸಾಮಾನ್ಯ ಆರೋಗ್ಯ ಪರೀಕ್ಷೆ ನಡೆಯಲಿದೆ. ಅಗ್ನಿವೀರ್‌ಗೆ ಸಂಬAಧಿಸಿದ ಪೂರಕ ಮಾಹಿತಿಯನ್ನೂ ಈ ಸಂದರ್ಭ ನೀಡಲಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಕ್ರೀಡಾ ಸಂಚಾಲಕರುಗಳಾದ ತಳೂರು ಕಾಳಪ್ಪ, ಕರ್ತಂಡ ಚಂದನ, ಸಂಘದ ಮಡಿಕೇರಿ ನಗರಾಧ್ಯಕ್ಷ ಪಾಣಿಕುಟ್ಟೀರ ಕುಟ್ಟಪ್ಪ, ಪದಾಧಿಕಾರಿ ಮಾದೆಯಂಡ ನಾಚಪ್ಪ ಹಾಜರಿದ್ದರು.