ಸೋಮವಾರಪೇಟೆ, ಡಿ. ೯: ಸುಂಟಿಕೊಪ್ಪದಿAದ ಕುಂಬೂರು ಗ್ರಾಮದ ಎಸ್ಟೇಟ್ಗೆ ಸಾಗಾಟಗೊಳ್ಳುತ್ತಿದ್ದ ಗೋ ಮಾಂಸ ಸಹಿತ ಆಟೋ ಚಾಲಕನನ್ನು ವಶಕ್ಕೆ ಪಡೆದ ಘಟನೆ ಇಂದು ಸಂಜೆ ನಡೆದಿದೆ.
ಕೊಡಗರಹಳ್ಳಿ ನಿವಾಸಿ, ಸುಂಟಿಕೊಪ್ಪದಲ್ಲಿ ಆಟೋ ಚಾಲಕನಾಗಿರುವ ಜಗದೀಶ್ ಎಂಬಾತ ಇಂದು ಸಂಜೆ ತನ್ನ ಆಟೋ (ಕೆ.ಎ.೧೨ ಬಿ. ೯೨೦೫)ದಲ್ಲಿ ಗೋ ಮಾಂಸವನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಭಜರಂಗದಳದ ಕಾರ್ಯಕರ್ತರು, ಕುಂಬೂರಿನಲ್ಲಿ ಆಟೋವನ್ನು ಹಿಂಬಾಲಿಸಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದೆ.
ಹಿAದೂಪರ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ತೆರಳಿದ ಸಂದರ್ಭ ಆಟೋದೊಳಗಿದ್ದ ಗೋಮಾಂಸವನ್ನು ಬ್ಲೂಮನ್ ತೋಟದೊಳಗೆ ಎಸೆದು ಚಾಲಕ ಪರಾರಿಯಾಗಲು ಯತ್ನಿಸುತ್ತಿದ್ದ ಎನ್ನಲಾಗಿದ್ದು, ಇದೇ ಸಂದರ್ಭ ತೋಟದ ಲೈನ್ಮನೆಯಲ್ಲಿ ವಾಸವಿರುವ ನಾಲ್ಕೈದು ಮಂದಿ ಅಸ್ಸಾಮಿಗರು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ.
ಆಟೋ ಚಾಲಕ ಜಗದೀಶ್ನ ಸಹಿತ ಆಟೋ ಹಾಗೂ ಸುಮಾರು ೧೫ ಕೆ.ಜಿ.ಯಷ್ಟು ಗೋ ಮಾಂಸವನ್ನು ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಠಾಣಾಧಿಕಾರಿ ಮೋಹನ್ ಕುಮಾರ್ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸುಂಟಿಕೊಪ್ಪದಿAದ ನಿರಂತರವಾಗಿ ಗೋಮಾಂಸ ಸಾಗಾಟವಾಗುತ್ತಿದ್ದು, ಕಟುಕರಿಗೆ ಕಾಫಿ ತೋಟದ ಲೈನ್ ಮನೆಗಳಲ್ಲಿರುವ ಅಸ್ಸಾಮಿಗರೇ ಗ್ರಾಹಕರಾಗಿದ್ದಾರೆ. ಮಾದಾಪುರ, ಜಂಬೂರು, ಕುಂಬೂರು, ತಾಕೇರಿ, ಕಿರಗಂದೂರು, ಬಿಳಿಗೇರಿಯ ದೊಡ್ಡ ಎಸ್ಟೇಟ್ಗಳಲ್ಲಿರುವ ಅಸ್ಸಾಮಿಗರಿಗೆ ಗೋ ಮಾಂಸ ಸಾಗಾಟವಾಗುತ್ತಿದೆ ಎಂದು ಭಜರಂಗದಳದ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗೋ ಹತ್ಯೆ, ಗೋ ಮಾಂಸ ಮಾರಾಟಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.