ಮಡಿಕೇರಿ, ಡಿ. ೯: ಭಾರತ ಸಂವಿಧಾನ ಅನುಚ್ಛೇದ ೨೭೫(೧)ರಡಿ ಇಂಪ್ರೂವಿAಗ್, ಹೆಲ್ತ್ಕೇರ್ ಏಕ್ಸೆಸ್ ಅಮಾಂಗ್ ಅಡ್ವೆöÊಸಿ ಪಾಪ್ಯೂಲೇಷನ್ಸ್ ಕಾರ್ಯಕ್ರಮದ ಅಂಗವಾದ ಟ್ರಿಬಲ್ ಹೆಲ್ತ್ ನ್ಯಾವಿಗೇಷನ್ ಮಾಡೆಲ್ ಕಾರ್ಯಕ್ರಮ ಅನುಷ್ಠಾನಗೊಳಿಸಲು ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿಗೆ ಒಬ್ಬರಂತೆ ಆದಿವಾಸಿ ಆರೋಗ್ಯ ಕಾರ್ಯಕರ್ತೆಯನ್ನು ಹಾಗೂ ಒಬ್ಬ ಜಿಲ್ಲಾಮಟ್ಟದ ಆದಿವಾಸಿ ಆರೋಗ್ಯ ಸಂಯೋಜಕರನ್ನು ಗೌರವಧನದ ಆಧಾರದಲ್ಲಿ ಆಯ್ಕೆ ಮಾಡುವ ಸಂಬAಧ ಅರ್ಜಿ ಆಹ್ವಾನಿಸಲಾಗಿದೆ.

ಷರತ್ತುಗಳು: ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಪರಿಶಿಷ್ಟ ಪಂಗಡದ ಜೇನುಕುರುಬ ಜನಾಂಗ ಆಗಿರಬೇಕು. ಅಭ್ಯರ್ಥಿಯು ೪೦ ವರ್ಷ ವಯೋಮಿತಿ ಒಳಗಿರತಕ್ಕದ್ದು. ಆದಿವಾಸಿ ಆರೋಗ್ಯ ಕಾರ್ಯಕರ್ತೆಯಾಗಲು ಹಾಗೂ ಜಿಲ್ಲಾ ಮಟ್ಟದ ಆರೋಗ್ಯ ಸಂಯೋಜಕರಾಗಲು ಬಿಎಸ್ಸಿ, ಎಎನ್‌ಎಂ/ನರ್ಸಿAಗ್ ತರಬೇತಿ, ಹೆಲ್ತ್, ಸೋಷಿಯಲ್ ವರ್ಕ್/ ಸಮಾಜ ವಿಜ್ಞಾನ ಪದವೀಧರರಾಗಿರಬೇಕು. ಉದ್ಯೋಗ ತಾತ್ಕಾಲಿಕವಾಗಿರುತ್ತದೆ. ಆದಿವಾಸಿ ಆರೋಗ್ಯ ಕಾರ್ಯಕರ್ತೆಯರಿಗೆ ರೂ.೧೨ ಸಾವಿರ ಗೌರವಧನ, ಜಿಲ್ಲಾಮಟ್ಟದ ಆರೋಗ್ಯ ಸಂಯೋಜಕರಿಗೆ ರೂ.೧೫ ಸಾವಿರ ಗೌರವಧನ. ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ. ಅರ್ಜಿ ಸಲ್ಲಿಸಲು ತಾ. ೧೬ ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗೆ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ, ಮಡಿಕೇರಿ. ೦೮೨೭೨-೨೦೦೫೦೦, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ೦೮೨೭೬-೨೮೧೧೧೫, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಪೊನ್ನಂಪೇಟೆ, ವೀರಾಜಪೇಟೆ ೦೮೨೭೪-೨೬೧೨೬೧ ನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಅವರು ತಿಳಿಸಿದ್ದಾರೆ.